7

ಆರ್ಕಿಟೆಕ್ಚರ್‌ನಲ್ಲಿ ಹೆಣ್ಣುಮಕ್ಕಳಿಗೆ ಭವಿಷ್ಯವಿಲ್ಲವೇ?

Published:
Updated:
ಆರ್ಕಿಟೆಕ್ಚರ್‌ನಲ್ಲಿ ಹೆಣ್ಣುಮಕ್ಕಳಿಗೆ ಭವಿಷ್ಯವಿಲ್ಲವೇ?

* ನನ್ನ ಹೆಸರು ದೀಕ್ಷಾ. ಮೊದಲನೇ ಪಿಯುಸಿ ಓದುತ್ತಿದ್ದೇನೆ. ನನಗೆ ಐಐಟಿಗೆ ಸೇರಬೇಕೆಂಬ ಆಸೆಯಿದೆ. ಅದಕ್ಕೆ ಜೆ.ಇ.ಇ. ಮೈನ್ಸ್ ಮತ್ತು ಅಡ್ವಾನ್ಸ್ಡ್‌ಎರಡರಲ್ಲೂ ಪಾಸಾಗಬೇಕೆ? ಬರೀ ಮೈನ್ಸ್‌ನಲ್ಲಿ ಪಾಸಾದರೆ ಯಾವ ಒಳ್ಳೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್‌ ದೊರಕುವುದು? ಏರೋನಾಟಿಕ್ ಎಂಜಿನಿಯರಿಂಗ್ ಯಾವ ಕಾಲೇಜಿನಲ್ಲಿ ಮಾಡಿದರೆ ಸ್ಕೋಪ್ ಇರುತ್ತದೆ. ಹಾಗೆಯೇ ಹೊರದೇಶಗಳಲ್ಲಿ ಎಂಜಿನಿಯರಿಂಗ್ ಮಾಡಲು ಯಾವ ರೀತಿ ಅರ್ಹತೆ ಪಡೆಯಬೇಕು. ಕಾಲೇಜುಗಳ ಮತ್ತು ತಗಲು ವೆಚ್ಚವನ್ನು ತಿಳಿಸಿ.

ಉತ್ತರ:
ಪ್ರಥಮ ಪಿಯುಸಿಯಿಂದಲೇ ನೀವು ಪ್ಲಾನ್‌ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ನೀವು ಪಿಸಿಎಂ ಕಾಂಬಿನೇಷನ್ ತೆಗೆದುಕೊಂಡಿದ್ದೀರಾ? ಬಹಳ ವಿದ್ಯಾರ್ಥಿಗಳಿಗೆ ತಾವು ಉತ್ತಮ ಎಂಜಿನಿಯರ್ ಕಾಲೇಜುಗಳಿಂದ ಪಾಸು ಮಾಡಿ ಒಳ್ಳೆಯ ಕೆಲಸವನ್ನು ಪಡೆಯಬೇಕು ಅನ್ನುವ ಹಂಬಲ ಇರುವುದು ಸಹಜ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಓದಬೇಕು ಎನ್ನುವುದು ಅನೇಕ ತಂದೆ ತಾಯಿಯರಿಗೂ, ವಿದ್ಯಾರ್ಥಿಗಳಿಗೂ ಇರುವ ಕನಸು. ಇದಕ್ಕಾಗಿ ಹಲವಾರು ತರಬೇತಿ ಇನ್ಸ್‌ಟಿಟ್ಯೂಟ್‌ಗಳಿಗೆ ದಾಖಲೆ ಮಾಡುತ್ತಾರೆ. ಏನೇ ಓದಬೇಕಾದರೂ ಬುದ್ಧಿವಂತಿಕೆ ಇರಲೇಬೇಕು. ಜೊತೆಯಲ್ಲಿ ಶ್ರಮ, ಶ್ರದ್ಧೆ ಮತ್ತು ನಿತ್ಯ ಕಡ್ಡಾಯವಾಗಿ ಓದು –ಇವನ್ನೂ ರೂಢಿಸಿಕೊಳ್ಳಬೇಕು. ಐಐಟಿ ಪ್ರವೇಶ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸುತ್ತಾರೆ. ದಿ ಮಿನಿಸ್ಟರಿ ಆಫ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ 2017ರ ಜೆಇಇ (ಮೈನ್)ನಲ್ಲಿ ಬದಲಾವಣೆಯನ್ನು ಸೂಚಿಸಿದೆ.

1. ಜೆಇಇ (ಮೈನ್‌) ಪರೀಕ್ಷೆಯ ರ‍್ಯಾಂಕ್ ಅನ್ನು ಪ್ರಕಟಿಸುವಾಗ 12ನೇ ತರಗತಿಯ ಅಂಕವನ್ನು ಪರಿಗಣಿಸುವುದಿಲ್ಲ.

2. ಐಐಟಿಗಳಿಗೆ, ಎನ್‌ಐಟಿಗಳಿಗೆ, ಐಐಐಟಿಗಳಿಗೆ, ಜೆಇಇ (ಅಡ್ವಾನ್ಸ್ಡ್‌) ರ‍್ಯಾಂಕ್ ಅನ್ನು ಪರಿಗಣಿಸುವಾಗ 12ನೇ ತರಗತಿಯಲ್ಲಿ ಶೇ.75ರಷ್ಟು ಅಂಕಗಳನ್ನು ಪಡೆದಿದ್ದಾರೆಯೆ ಎಂದು ಗಮನಿಸುತ್ತಾರೆ. ವಿದ್ಯಾರ್ಥಿಗಳು ಜೆಇಇ (ಮೈನ್‌)ಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಇದು ಸರಿಯಾದ ಅರ್ಜಿಪತ್ರವೇ ಎನ್ನುವುದನ್ನು ಖಾತ್ರಿ ಪಡೆಯಲು www.jeemain.nic ವೆಬ್‌ಸೈಟ್‌ನಿಂದ ಧೃಡೀಕರಿಸಬಹುದು.

ನಿಮ್ಮ ಆಧಾರ್ ಕಾರ್ಡ್ ಲಗತ್ತಿಸಿದರೆ ವಿದ್ಯಾರ್ಥಿಯ ವಿವರಗಳು ಪ್ರಾಮಾಣಿಕವಾಗಿವೆ ಎನ್ನುವುದು ಖಚಿತವಾಗುತ್ತದೆ. ಈ ಪರೀಕ್ಷೆಯನ್ನು ಪೇಪರ್ ಮತ್ತು ಪೆನ್ಸಿಲ್‌ ಬೇಸ್ಡ್‌, ಕಂಪ್ಯೂಟರ್ ಬೇಸ್ಡ್‌ ಎರಡು ರೀತಿಯಲ್ಲಿ ತೆಗೆದುಕೊಳ್ಳಬಹುದು. ಗಮನದಲ್ಲಿ ಇಡಬೇಕಾದ ಅಂಶ, ಒಬ್ಬ ವಿದ್ಯಾರ್ಥಿಯು ಒಂದೇ ಅರ್ಜಿಯನ್ನು ಸಲ್ಲಿಸಬೇಕು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಹಾಕಿದರೆ ಅದನ್ನು ಪರಿಗಣಿಸುವುದಿಲ್ಲ.

ಜೆಇಇ (ಅಡ್ವಾನ್ಸ್ಡ್‌) ಪರೀಕ್ಷೆಗೆ, ನಿಮ್ಮ ಜೆಇಇ (ಮೈನ್‌)ನಲ್ಲಿ ಹೇಗೆ ಮಾಡಿದ್ದೀರಾ, ವಯೋಮಿತಿ, ಎಷ್ಟು ಸಲ ಪ್ರಯತ್ನಿಸಿದ್ದೀರಾ, 12ನೇ ಕ್ಲಾಸ್ ಪರೀಕ್ಷೆಯ ವಿವರ ಮತ್ತು ಹಿಂದೇನಾದರೂ ಐಐಟಿಗೆ ಸೀಟು ಸಿಕ್ಕಿತ್ತೆ – ಈ ಎಲ್ಲ ವಿವರಗಳನ್ನು ಪರಿಶೀಲಿಸುತ್ತಾರೆ. ಹೆಚ್ಚಿನ ವಿವರಗಳನ್ನು ನೀವು www.jeeadv.ac.in ಇಂದ ಪಡೆಯಬಹುದು. ನಿಮ್ಮ ಮೊದಲ ಸಂದೇಹ ಈ ಉತ್ತರದಿಂದ ಕರಗಿದೆ ಎಂದು ಭಾವಿಸುತ್ತೇನೆ.

ಇನ್ನು ಹೊರದೇಶದಿಂದ ಎಂಜಿನಿಯರಿಂಗ್ ಡಿಗ್ರಿ ಪಡೆಯುವ ಹಂಬಲ ಇದ್ದಲ್ಲಿ ನೀವು ಎಸ್‌ಎಟಿ (ಸ್ಕೂಲಾಸ್ಟಿಕ್ ಆ್ಯಪ್ಟಿಟ್ಯೂಡ್ ಟೆಸ್ಟ್ ಅಥವಾ ಸ್ಕೂಲಾಸ್ಟಿಕ್ ಅಸೆಸ್‌ಮೆಂಟ್ ಟೆಸ್ಟ್‌) ಪರೀಕ್ಷೆಯನ್ನು ತೆಗೆದುಕೊಳ್ಳಿ. ಈ ಪರೀಕ್ಷೆಯ ವಿವರವನ್ನು ನೀವು www.co**egeboard.org ಇಂದ ಪಡೆಯಿರಿ. ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಿಂದಲೇ ಪಡೆಯಬಹುದು.

* ನನ್ನ ಹೆಸರು ರೂಪ; ಬೆಂಗಳೂರು. ನಾನು ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ತಾಯಿ. ನನ್ನ ಮಗಳು ಚೆನ್ನಾಗಿ ಓದುತ್ತಿದ್ದಾಳೆ. ಅವಳಿಗೆ ಭವಿಷ್ಯದಲ್ಲಿ ಅರ್ಕಿಟೆಕ್ಟ್ ಆಗುವ ಆಸೆ ಇದೆ. ಆದರೆ ನಮಗೆ ಅದರಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯವಿಲ್ಲ ಎಂಬ ಅಭಿಪ್ರಾಯ ಮತ್ತು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಅದರಲ್ಲಿ ಸಿಗುವ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿ. ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡರೆ ಅದರಲ್ಲಿರುವ ಉತ್ತಮ ವಿಭಾಗಗಳ ಬಗ್ಗೆ ಮಾಹಿತಿ ನೀಡಿ.

ಉತ್ತರ: ಇದು ನಿಮ್ಮ ತಪ್ಪು ಭಾವನೆ; ಅನೇಕರು ಸ್ನೇಹಿತರ ಹತ್ತಿರ ಮಾತನಾಡುವಾಗ ಅವರಲ್ಲಿರುವ ಅಜ್ಞಾನದ ದೃಷ್ಟಿಕೋನವನ್ನು ಇನ್ನೊಬ್ಬರಿಗೂ ತಗಲಿಸುತ್ತಾರೆ. ನನ್ನ ಪ್ರಕಾರ ಈ ಆರ್ಕಿಟೆಕ್ಚರ್‌ ಕೋರ್ಸ್ ಹೆಣ್ಣುಮಕ್ಕಳಿಗೆ ಸೂಕ್ತವಾದದ್ದು. ಎನ್‌ಎಟಿಎ–ನ್ಯಾಷನಲ್‌ ಆ್ಯಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್‌ ಎನ್ನುವ ಪರೀಕ್ಷೆಯಲ್ಲಿ ಕ್ವಾಲಿಫೈ ಆಗಬೇಕು. ಈ ಪರೀಕ್ಷೆ ವಿದ್ಯಾರ್ಥಿಯ ಡ್ರಾಯಿಂಗ್ ಮತ್ತು ಅಬರ್ಸ್‌ವೇಷನ್‌ ಸ್ಕಿಲ್ಸ್‌, ಸೆನ್ಸ್ ಆಫ್ ಪ್ರಪ್ರೋರ್‌ಷನ್‌, ಎಸ್ತೆಟಿಕ್ ಸೆನ್ಸಿಟಿವಿ ಅಂಡ್ ಕ್ರಿಟಿಕಲ್ ಥಿಂಕಿಂಗ್ ಎಬಿಲಿಟಿಯನ್ನು ಪರೀಕ್ಷಿಸುತ್ತದೆ.

ಈ ಪರೀಕ್ಷೆಗೆ ಲೋವರ್ ಏಜ್ ಲಿಮಿಟ್ ಇಲ್ಲ, 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತದೊಂದಿಗೆ ಶೇ. 50ರಷ್ಟು ಅಂಕಗಳನ್ನು ತೆಗೆದುಕೊಂಡಿರುವವರು, ಎನ್‌ಎಟಿಎ ಆಫಿಶೀಯಲ್‌ಗೆ ಹಾಜರಾಗಬಹುದು. ಅರ್ಜಿಯನ್ನು ಎನ್‌ಎಟಿಎ ಆಫಿಶೀಯಲ್ ವೆಬ್‌ಸೈಟ್ www.nata.nic.in ಅಲ್ಲಿ ಭರ್ತಿ ಮಾಡಬೇಕು. ಬಿ.ಆರ್ಕ್‌. (ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್‌) 5 ವರ್ಷದ ಕೋರ್ಸ್‌. ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಸ್ಪೆಸಿಫಿಕ್ ಆ್ಯಪ್ಟಿಟ್ಯೂಡ್ ಇದ್ದವರು ಮಾತ್ರ ಮಾಡಲು ಸಾಧ್ಯ. ಸ್ನಾತಕೋತ್ತರ ಪರೀಕ್ಷೆ ಎಂ. ಆರ್ಕ್. ಮತ್ತು ಪಿಎಚ್‌.ಡಿ. ಕೋರ್ಸ್ ಸಹ ಇದೆ.

ಬೆಂಗಳೂರು ಎಷ್ಟು ಬೆಳೆದಿದೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದೇವೆ. ಎಲ್ಲಿ ನೋಡಿದರು ಅಪಾರ್ಟ್‌ಮೆಂಟ್‌ಗಳು, ಕಾಂಪ್ಲೆಕ್ಸ್‌ಗಳು, ಮಾಲ್‌ಗಳು, ಸಾಫ್ಟ್‌ವೇರ್ ಪಾರ್ಕ್ಸ್‌ – ಇನ್ನೂ ಅನೇಕ ಸುಂದರವಾದ, ಎತ್ತರದ ಕಟ್ಟಡಗಳು ಕಂಡುಬರುತ್ತಿವೆ. ಇವನ್ನು ಆರ್ಕಿಟೆಕ್ಚರ್‌ಗಳೇ ಯೋಚಿಸಿ, ನಿರ್ಮಾಣದ ಹಂತಕ್ಕೆ ತಂದಿರುವುದು. ಸರ್ಕಾರಿ ಮತ್ತು ಖಾಸಗಿ ಸಂಸ್ಖೆಗಳಲ್ಲೂ ಆರ್ಕಿಟೆಕ್ಚರ್‌ಗಳು ಕೆಲಸ ಮಾಡುತ್ತಾರೆ. ಇನ್ನು ಪಬ್ಲಿಕ್‌ ವರ್ಕ್ಸ್ ಡಿಪಾರ್ಟ್‌ಮೆಂಟ್,  ಮಿನಿಸ್ಟರಿ ಆಫ್ ಡಿಫೆನ್ಸ್‌, ನ್ಯಾಷನಲ್ ಬಿಲ್ಡಿಂಗ್ ಆರ್ಗನೈಜೇಷನ್‌, ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಆರ್ಗನೈಜೇಷನ್, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಅರ್ಬನ್ ಆಪೇರ್ಸ್‌, ಡಿಪಾರ್ಟ್‌ಮೆಂಟ್ ಆಫ್ ರೈಲ್ವೆ, ಪೋಸ್ಟ್ ಅಂಡ್ ಟೆಲಿಗ್ರಾಫ್ಸ್, ಪಬ್ಲಿಕ್ ಸೆಕ್ಟರ್ ಅಂಡರ್‌ಟೇಕಿಂಗ್ – ಇನ್ನೂ ಅನೇಕ ಜಾಗಗಳಲ್ಲಿ ಉದ್ಯೋಗವಕಾಶವಿದೆ. ನಿಮ್ಮ ಮಗಳಲ್ಲಿ ವಿಶೇಷವಾದ ಆ್ಯಪ್ಟಿಟ್ಯೂಡ್ ಇದ್ದಲ್ಲಿ, ನೀವು ಖಂಡಿತಾ ಅವಳನ್ನು ಪ್ರೋತ್ಸಾಹಿಸಿ.

* ನಾನು ಬಿಎಸ್‌ಡ್ಬ್ಲೂ ಕೋರ್ಸ್ ಮಾಡುತ್ತಿದ್ದೇನೆ. ನನಗೆ ಈ ಕೋರ್ಸ್‌ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಈ ಕೋರ್ಸ್‌ನ ಜೊತೆಗೆ ಮಾಡಬೇಕಾದ ಮುಂದಿನ ಹಂತದ ಶಿಕ್ಷಣದ ಬಗ್ಗೆ ತಿಳಿಸಿ. ನಾನು ಯಲ್ಲಾಪುರದ ಒಂದು ಹಳ್ಳಿಯ ನಿವಾಸಿ; ಕೃಷಿ ಕುಟುಂಬದವನು; ನಾನು ಎಸ್‌ಸಿ. ನನಗೆ ವಿದ್ಯಾರ್ಥಿವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ.

ಉತ್ತರ: ಸೋಷಿಯಲ್ ವರ್ಕ್ಸ್ ಬಗ್ಗೆ, ನೀವು ಈಗಾಗಲೇ ಸೆಪ್ಟೆಂಬರ್ 4ನೇ ತಾರೀಖು 2017ರ ಅಂಕಣದಲ್ಲಿ ವಿವರ ತಿಳಿಸಿದ್ದೇವೆ; ನೀವು ಗಮನದಿಂದ ಅದನ್ನು ಓದಬೇಕು. ವಿದ್ಯಾರ್ಥಿವೇತನ ಎಸ್‌ಸಿ/ಎಸ್‌ಟಿ ಮತ್ತು ಜನರಲ್ ಕ್ಯಾಟಗರಿ  – ಎರಡರಲ್ಲೂ ಇದೆ. 

ವು ಅರ್ಜಿ ಹಾಕಬಹುದಾದ ಕೆಲವು ವಿದ್ಯಾರ್ಥಿವೇತನಗಳು:

1. ಸಾಹು ಜೈನ್ ಟ್ರಸ್ಟ್, ಟ್ಯೂನಿಸ್ ಹೌಸ್, #7, ಬಹದೂರ್ ಜಾಫರ್ ಮಾರ್ಸ್‌, ನವದೆಹಲಿ – 110002

2. ನ್ಯಾಷನಲ್ ಸ್ಕಾಲರ್‌ಶಿಪ್ ಡಿವಿಷನ್‌ ಮಿನಿಸ್ಟರಿ ಆಫ್ ಹ್ಯೂಮನ್ ರಿಸೋರ್ಸ್‌ ಡೆವಲಪ್‌ಮೆಂಟ್ ಆಫ್ ಹೈಯರ್ ಎಜುಕೇಷನ್ ವೆಸ್ಟ್ ಬ್ಲಾಕ್ 1, 2ನೇ ಮಹಡಿ, ರೂಂ ನಂ 6, ಆರ್‌.ಕೆ ಪುರಂ, ಸೆಕ್ಟರ್‌ 1, ನವದೆಹಲಿ – 110066

3. ಪೈರ್ ಅಂಡ್ ಲೌಲ್ಲಿ ಫೌಂಡೇಶನ್ ಸ್ಕಾಲರ್‌ಶಿಫ್ ಫೌಂಡೇಶನ್ (ಫಾರ್ ಗರ್ಲ್ ಸ್ಟೂಡೆಂಟ್ ಓನ್ಲಿ) ಹಿಂದೂಸ್ತಾನ್ ಯುನಿ ಲವೆಲ್ ಹೌಸ್ ಬಿ.ಡಿ ಸ್ವಂತ ಮಾರ್ಸ್, ಚಕಲ, ಮುಂಬೈ – 400099.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry