ಬಾಲ್ಯ ಸ್ನೇಹಿತನ ಜತೆ ನಟಿ ನೇಹಾ ಗೌಡ ನಿಶ್ಚಿತಾರ್ಥ

ಬುಧವಾರ, ಜೂನ್ 19, 2019
29 °C

ಬಾಲ್ಯ ಸ್ನೇಹಿತನ ಜತೆ ನಟಿ ನೇಹಾ ಗೌಡ ನಿಶ್ಚಿತಾರ್ಥ

Published:
Updated:
ಬಾಲ್ಯ ಸ್ನೇಹಿತನ ಜತೆ ನಟಿ ನೇಹಾ ಗೌಡ ನಿಶ್ಚಿತಾರ್ಥ

'ಅವನು ಅಂದ್ರೆ ಬಾಲ್ಯದಲ್ಲಿ ಕಿತ್ತಾಡ್ತಾ ಇದ್ದ ಶತ್ರು, ಅವನು ಅಂದ್ರೆ ನನ್ನ ಪಾಲಿನ ಆಕರ್ಷಣೆ, ಅವನು ಅಂದ್ರೆ ನನ್ನನ್ನು ಒಪ್ಪಿಕೊಂಡ ಪ್ರೇಮಿ, ಅವನು ಅಂದ್ರೆ ನನ್ನ ಭವಿಷ್ಯ. ಅವನೇ ಚಂದನ್‌ಗೌಡ. ಅವನ ಜೊತೆಗೆ ನನ್ನ ನಿಶ್ಚಿತಾರ್ಥ ಆಗಿದೆ. ನನಗಂತೂ ತುಂಬಾ ಖುಷಿ ಆಗ್ತಿದೆ...'

ಇದು ನೇಹಾ ಗೌಡ ಅವರ ಖುಷಿಯ ಮಾತು. ಫೇಸ್‌ಬುಕ್‌ನಲ್ಲಿ ಈ ಹುಡುಗಿ ಬರೆದುಕೊಂಡಿರುವ ಪದಗಳನ್ನು ಓದಿದರೆ ಆಕೆಯ ಮನ ಖುಷಿಯಿಂದ ಚಿಟ್ಟೆಯಂತಾಗಿರುವುದು ಅರಿವಾಗುತ್ತೆ.

16 ವರ್ಷಗಳ ಪ್ರೀತಿ ಮತ್ತು ಪ್ರೀತಿಸಿದವರನ್ನು ಮದುವೆ ಆಗುವ ಖುಷಿ ಅಂದ್ರೆ ಸುಮ್ನೇನಾ?

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನೇಹಾ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹೀಗಂತ ಸಂಭ್ರಮದಿಂದ ಬರೆದುಕೊಂಡಿದ್ದಾರೆ. ಮಾತ್ರವಲ್ಲ ನಿಶ್ಚಿತಾರ್ಥದ ಉಂಗುರ ಎದ್ದು ಕಾಣುವಂತೆ ಇನಿಯನ ಬೆರಳಿಗೆ ಬೆರಳು ಬೆಸೆದಿರುವ ಫೋಟೊ ಸಹ ಪೋಸ್ಟ್‌ ಮಾಡಿದ್ದಾರೆ.

ಇವರ ನಿಶ್ಚಿತಾರ್ಥ ಸೆ.30ರಂದು ಬೆಂಗಳೂರಿನಲ್ಲಿ ನೆರವೇರಿತು. ಮನೆಯಲ್ಲಿಯೇ ನಡೆದ ಈ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಕಿರುತೆರೆಯ ಕೆಲವು ಕಲಾವಿದರು ಪಾಲ್ಗೊಂಡಿದ್ದರು. ನೇಹಾ ಕೈಹಿಡಿಯುತ್ತಿರುವ ಚಂದನ್‌ ಹಾಂಕಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರು. ಆದರೆ ಮದುವೆ ಯಾವಾಗ ಎನ್ನುವ ಬಗ್ಗೆ ಮಾತ್ರ ಇವರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry