ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪ್ಪನಾದ ಮೇಲೆ ಬದಲಾದೆ...’

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಫಿಟ್‌ನೆಸ್‌ ಅಂದ್ರೆ...
ಫಿಟ್‌ ಅಂದ್ರೆ ನಮ್ಮೊಳಗೆ ನಾವು ಕಂಫರ್ಟೆಬಲ್‌ ಆಗಿರಬೇಕು. ಬೆಳಿಗ್ಗೆ ಎದ್ದಾಗ ಮನಸ್ಸು, ದೇಹ ಎರಡೂ ಖುಷಿ ಖುಷಿಯಾಗಿರಬೇಕು.

‘ಫಿಟ್‌ ಟು ಫೈಟ್‌’ ಅಭಿಯಾನ...
ನಾನು ಒಂದು ಹೆಣ್ಣುಮಗುವಿನ ತಂದೆ. ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ನಾನೂ ಸೇರಿದಂತೆ ಎಲ್ಲರೂ ಯೋಚಿಸಲೇಬೇಕು. ಸಮಾಜದಲ್ಲಿ ಹೆಣ್ಣು, ಗಂಡು ಎಂಬ ಭೇದಭಾವ ಮುಂದುವರಿದಿದೆ. ದೌರ್ಜನ್ಯಗಳೂ ನಡೆಯುತ್ತಿವೆ. ಹೀಗಾಗಿ ಸ್ವರಕ್ಷಣಾ ತಂತ್ರ ಎಲ್ಲರಿಗೂ ತಿಳಿದಿರಬೇಕು. ಹೆಣ್ಣುಮಕ್ಕಳು ದೈಹಿಕ, ಮಾನಸಿಕ ಹಾಗೂ ಸಮಾಜಿಕವಾಗಿಯೂ ಫಿಟ್‌ ಆಗಿರಬೇಕು. ಅನ್ಯಾಯ ಹಾಗೂ ತಾರತಮ್ಯದ ವಿರುದ್ಧ ಹೋರಾಡಬೇಕು.

ಚಿತ್ರರಂಗದ ಪಯಣ...
ನಟನಾದವನು ಎಲ್ಲಾ ಪಾತ್ರಗಳಿಗೆ ಸಿದ್ಧ ಇರಬೇಕು. ನಾನು 21ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದೆ. ‘ಪದ್ಮಾವತಿ’ ಸಿನಿಮಾದಲ್ಲಿ ರಾಜನ ಪಾತ್ರದಲ್ಲಿ ನಟಿಸುತ್ತಿದ್ದೇನೆ. 24ನೇ ವಯಸ್ಸಿನಲ್ಲಿ ನಾನು ಚಾಕೊಲೆಟ್‌ ಹೀರೊ ರೀತಿಯ ಪಾತ್ರವನ್ನು ಆಯ್ಕೆ ಮಾಡುತ್ತಿದ್ದೆ. ಗಂಭೀರ ಪಾತ್ರಗಳನ್ನು ಮಾಡುವಷ್ಟು ಪ್ರಬುದ್ಧತೆ ಅಂದಿರಲಿಲ್ಲ. ಆದರೆ ಅನುಭವ ಹೆಚ್ಚಿದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಚಿತ್ರರಂಗದಲ್ಲಿ ಇದುವರೆಗೆ ನನ್ನದು ಸುಂದರ ಪಯಣ.

ದಾಂಪತ್ಯ...
ನಮ್ಮ ಪತ್ನಿ ಮೀರಾ ನನ್ನ ಬಗ್ಗೆ ತುಂಬಾ ಕೇರ್ ತಗೊಳ್ತಾರೆ. ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ. ಮೀರಾ ಯಾವಾಗಲೂ ನನಗೆ ಸಲಹೆ ನೀಡುತ್ತಿರುತ್ತಾಳೆ. ನಾನೂ ಮುಖ್ಯ ವಿಷಯಗಳನ್ನು ಆಕೆಯೊಂದಿಗೆ ಚರ್ಚಿಸಿಯೇ ನಿರ್ಧರಿಸುತ್ತೇನೆ.

ಅಪ್ಪ ಆದ ಖುಷಿ...
ಮಗಳು ಮಿಶಾ ಬಂದ ಮೇಲೆ ನನ್ನ ಬದುಕು ತುಂಬಾ ಬದಲಾಗಿದೆ. ಹತ್ತು ವರ್ಷದ ಹಿಂದಿನ ಶಾಹಿದ್‌, ಈಗಿನ ಶಾಹಿದ್‌ ನೋಡಿದರೆ ಇದು ಸಂಪೂರ್ಣ ರೂಪಾಂತರ. ಮಗುವಾದ ಬಳಿಕ ನನ್ನ ದೃಷ್ಟಿಕೋನ ಹಾಗೂ ಯೋಚನಾ ವಿಧಾನದಲ್ಲಿ ಬದಲಾವಣೆ ಆಗಿರುವುದು ನನ್ನ ಗಮನಕ್ಕೇ ಬಂದಿದೆ. ಆದರೆ ಮಗುವಿನೊಂದಿಗೆ ಮಾತ್ರ ಮಗುವಾಗೇ ಇರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT