ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯಲ್ಲಿ ಪಳಗುವಾಸೆ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಾಡೆಲಿಂಗ್‌ಗೆ ಹೇಳಿ ಮಾಡಿಸಿದ ಆಕರ್ಷಕ ಮೈಕಟ್ಟು ಹೊಂದಿರುವ ಸುನಿಲ್‌ ರಾಜ್ ಹುಟ್ಟಿ ಬೆಳೆದಿದ್ದ ಬೆಂಗಳೂರಿನಲ್ಲಿ. ಚಿಕ್ಕಂದಿನಿಂದಲೇ ಸಿನಿಮಾ, ಮಾಡೆಲಿಂಗ್‌ ಆಸಕ್ತಿ. ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಮಾಡೆಲಿಂಗ್‌ನತ್ತ ಹೊರಳಿತು ಮನ. ಆದರೆ ಮನೆಯವರು ‘ಓದು, ಕೆಲಸ ಮೊದಲು, ಮಾಡೆಲಿಂಗ್‌ ಆಮೇಲೆ’ ಎಂದು ಕಟ್ಟುನಿಟ್ಟಾಗಿ ಹೇಳಿದ್ದರಿಂದ ಉದ್ಯೋಗ ದೊರೆತ ಬಳಿಕವೇ ಮಾಡೆಲಿಂಗ್‌ನಲ್ಲಿ ಕಾಣಿಸಿಕೊಂಡರು.

ಕಾಲೇಜಿನಲ್ಲಿ ವಿದ್ಯಾಭ್ಯಾಸದ ಜೊತೆಜೊತೆಗೆ ಫ್ಯಾಷನ್‌ ಷೋ, ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದರು. ರೇಮಂಡ್ಸ್‌, ರೆಕ್‌ ಪ್ರೊಡಕ್ಷನ್ಸ್‌, ಸೈ ಫ್ಯಾಷನ್‌, ಫೆಸ್ಟ್‌, ರಿಲಯನ್ಸ್‌ ಜ್ಯುವೆಲ್ಸ್‌...ಹೀಗೆ ಅನೇಕ ಟಿವಿ ಹಾಗೂ ಪ್ರಿಂಟ್‌ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಈಚೆಗೆ ಕನ್ನಡದ ಎರಡು ವಾಹಿನಿಗಳ ಧಾರಾವಾಹಿಗಳಲ್ಲಿ ಅವಕಾಶ ಹುಡುಕಿಕೊಂಡು ಬಂದಿತ್ತು. ಆದರೆ ಅದೇ ಸಮಯದಲ್ಲಿ ಆರೋಗ್ಯ ಸರಿಯಿಲ್ಲದೆ, ತೂಕ ಕಳೆದುಕೊಂಡಿದ್ದರಿಂದ ಅವಕಾಶಗಳು ಕೈ ತಪ್ಪಿದವು' ಎಂಬುದು ಅವರ ಅಳಲು. ‘ಭವಿಷ್ಯದಲ್ಲಿ ಇನ್ನೂ ಒಳ್ಳೆಯ ಅವಕಾಶಗಳು ಬರಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೆ’ ಎನ್ನುವ ಅವರ ಮಾತಿನಲ್ಲಿ ಆತ್ಮವಿಶ್ವಾಸದ ಸೆಳೆ ಇದೆ.

ಸದ್ಯ ಮಾಡೆಲಿಂಗ್‌ ಕ್ಷೇತ್ರದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿರುವ ಸುನಿಲ್‌ ನಟನೆ ಬಗ್ಗೆಯೂ ಅರಿತುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ‘ಉತ್ತಮ ಅವಕಾಶ ಸಿಕ್ಕರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಸಂಸ್ಥೆಯಲ್ಲಿ ಪ್ರಾಜೆಕ್ಟ್‌ ಅಸೋಸಿಯೇಟ್‌ ಕೆಲಸಕ್ಕೆ ರಾಜೀನಾಮೆ ಕೊಡಲೂ ಸಿದ್ಧ’ ಎನ್ನುತ್ತಾರೆ.

ಆರು ಅಡಿ ಮೂರು ಇಂಚು ಎತ್ತರದ ಈ ಅಜಾನುಬಾಹುವಿನ ತೂಕ 80 ಕೆ.ಜಿ. ಜೀನ್ಸ್‌, ಜಾಕೆಟ್‌, ಟೀ–ಶರ್ಟ್‌  ತುಂಬಾ ಇಷ್ಟವಂತೆ. ಅಂಗಸೌಷ್ಟವವನ್ನು ಜತನವಾಗಿ ಕಾಪಾಡಿಕೊಂಡಿದ್ದಾರೆ. ನಟನೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 

ದೇಹಸಿರಿಗಾಗಿ ಏನೆಲ್ಲಾ...

ಪ್ರತಿದಿನ ಬೆಳಿಗ್ಗೆ ಎರಡು ತಾಸು ಜಿಮ್‌ನಲ್ಲಿ ವರ್ಕೌಟ್

ಜಿಮ್‌ಗೆ ಹೋಗುವ ಮೊದಲು ಓಟ್ಸ್‌, ಬಾಳೆಹಣ್ಣು ಸೇವನೆ

ಜಿಮ್‌ನಿಂದ ಬಂದ ಮೇಲೆ ಬಾಳೆಹಣ್ಣು, ಬಾದಾಮಿ, ಹಾಲು ಸೇರಿಸಿ ರುಬ್ಬಿದ ಪ್ರೊಟೀನ್‌ ಶೇಕ್

ಮಧ್ಯಾಹ್ನಕ್ಕೆ ಚಪಾತಿ, ಅನ್ನ , ತರಕಾರಿಗಳು, ಮೊಟ್ಟೆ

ರಾತ್ರಿಗೆ ಚಪಾತಿ, ಪಾಲಕ್‌ ಸೊಪ್ಪಿನ ಪಲ್ಯ ಹಾಗೂ ಮೊಟ್ಟೆ

ವಾರದಲ್ಲಿ ಮೂರು ದಿನ ಚಿಕನ್‌ ಬಿರಿಯಾನಿ, ಮಾಂಸದ ಖಾದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT