ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿ ಬೇಕು

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 6 ರಿಂದ 8ನೇ ತರಗತಿಯ ಪ್ರೌಢ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಕರೆದಿರುವುದು ಸಂತಸದ ವಿಚಾರ. ಇಲ್ಲಿ ಟಿಇಟಿ ಮತ್ತು ಬಿಇಡಿ ಅರ್ಹತೆ ಹೊಂದಿರುವವರಿಗೆ ಅವಕಾಶ ನೀಡಲಾಗಿದೆ. ಆದರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಂತರ್ಜಾಲದ ಸಮಸ್ಯೆಯಿಂದ ಅರ್ಜಿಯಲ್ಲಿ ನಾನಾ ರೀತಿಯ ಸಮಸ್ಯೆಗಳು ಕಂಡುಬಂದಿವೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊಟ್ಟಂತಹ ಮಾಹಿತಿಗಳು ಸಹ ಬದಲಾಗಿದ್ದು, ಮುದ್ರಣದಲ್ಲಿ ದೋಷಗಳು ಕಂಡುಬಂದಿವೆ. ಉದಾಹರಣೆಗೆ ನಾನು (ಅರ್ಜಿ ಸಂಖ್ಯೆ-1012833) ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಹುಟ್ಟಿದ ದಿನಾಂಕವನ್ನು 05.05.1983 ಎಂದು ನಮೂದಿಸಿದ್ದೆ. ಆದರೆ ಅರ್ಜಿಯ ಮುದ್ರಣದ ಸಮಯದಲ್ಲಿ ಅದು 03.05.1983 ಎಂದು ಬದಲಾಗಿದೆ. ಅದೇ ರೀತಿ ವಿಷಯವಾರು ವ್ಯತ್ಯಾಸವೂ ಕಂಡುಬಂದಿದೆ. (ಉದಾ: ಕನ್ನಡ ವಿಷಯವು ಹಿಂದಿ ಎಂದು ಬದಲಾಗಿದೆ) ಸಹಾಯವಾಣಿಯನ್ನು ಸಂಪರ್ಕಿಸಿದರೆ ಸರಿಯಾದ ಸಲಹೆ ದೊರೆಯುತ್ತಿಲ್ಲ. ಇಲಾಖೆಯವರು ಅರ್ಜಿಯ ಲೋಪಗಳನ್ನು ತಿದ್ದುಪಡಿ ಮಾಡಲು ಅವಕಾಶ ಮಾಡಿಕೋಡಬೇಕು.

–ಮಹದೇವಸ್ವಾಮಿ ಕೆ.ಎಚ್., ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT