ಬೆಕ್ಕುಗಳಿಂದ ಪ್ರತಿ ದಿನ ಹತ್ತು ಲಕ್ಷ ಪಕ್ಷಿ ಸಾವು

ಸೋಮವಾರ, ಜೂನ್ 24, 2019
29 °C

ಬೆಕ್ಕುಗಳಿಂದ ಪ್ರತಿ ದಿನ ಹತ್ತು ಲಕ್ಷ ಪಕ್ಷಿ ಸಾವು

Published:
Updated:

ಮೆಲ್ಬರ್ನ್‌ : ಆಸ್ಟ್ರೇಲಿಯಾದಲ್ಲಿ ಬೆಕ್ಕುಗಳು ಪ್ರತಿ ದಿನ 10 ಲಕ್ಷ ಪಕ್ಷಿಗಳನ್ನು ಸಾಯಿಸುತ್ತವೆ. ಇದರಲ್ಲಿ ಕಾಡು ಬೆಕ್ಕುಗಳ ಪಾಲು ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ.

ಒಂದು ವರ್ಷದಲ್ಲಿ ಕಾಡು ಬೆಕ್ಕುಗಳು 31.6 ಕೋಟಿ ಪಕ್ಷಿಗಳನ್ನು ಸಾಯಿಸುತ್ತಿದ್ದು, ಮನೆಯಲ್ಲಿ ಸಾಕಿದ ಬೆಕ್ಕುಗಳು 6 ಕೋಟಿ ಪಕ್ಷಿಗಳನ್ನು ಸಾಯಿಸುತ್ತಿವೆ ಎಂದು ವರದಿ ಹೇಳಿದೆ.

ದೇಶಾದ್ಯಂತ 100 ಸ್ಥಳಗಳಲ್ಲಿ  ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಬೆಕ್ಕುಗಳ ಸಂಖ್ಯೆ, ಆಹಾರ ಸೇರಿದಂತೆ ಹಲವು ಅಂಶಗಳನ್ನು ಅಧ್ಯಯನ ಸಂದರ್ಭದಲ್ಲಿ ಪರಿಗಣಿಸಲಾಗಿತ್ತು.

ಜೈವಿಕ ಸಂರಕ್ಷಣೆ ಕುರಿತಾದ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿರುವ ಸಂಶೋಧಕ ಪ್ರೊ. ಜಾನ್ ವೊನಾರಸ್ಕಿ ಅವರು, ’ಈ ಹಿಂದೆ ಆಸ್ಟ್ರೇಲಿಯಾ ಸಸ್ತನಿಗಳ ಮೇಲೆ ಬೆಕ್ಕುಗಳ ಪ್ರಭಾವದ ಬಗ್ಗೆ ಅಧ್ಯಯನ ನಡೆದಿತ್ತು. ಇದೊಂದು ಆಸ್ಟ್ರೇಲಿಯಾದ ಪಕ್ಷಿಗಳ ಮೇಲೆ ಬೆಕ್ಕುಗಳು ನಡೆಸುತ್ತಿರುವ ದಾಳಿಯ ಬಗ್ಗೆ ರಾಷ್ಟ್ರವ್ಯಾಪಿ ನಡೆದ ಮೊದಲ ಮೌಲ್ಯಮಾಪನ’ ಎಂದು ತಿಳಿಸಿದ್ದಾರೆ.

‘ಬೆಕ್ಕುಗಳು ಪಕ್ಷಿಗಳನ್ನು ಕೊಲ್ಲುತ್ತವೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಈಗ ನಡೆಸಿರುವ ರಾಷ್ಟ್ರಮಟ್ಟದ ಅಧ್ಯಯನದಲ್ಲಿ ಒಂದು ಜೀವಿ, ಇನ್ನೊಂದು ಜೀವಿ ಯಾವ ರೀತಿಯಲ್ಲಿ ಅವಲಂಬನೆಯಾಗುತ್ತಿದೆ ಎನ್ನುವುದನ್ನು ವಿಶ್ಲೇಷಿಸಲಾಗಿದೆ. ಜತೆಗೆ, ವಿವಿಧ ಜಾತಿಗಳ ಜೀವಿಗಳ ಸಂಖ್ಯೆಯಲ್ಲೂ ಕುಸಿತವಾಗುವ ಸಾಧ್ಯತೆ ಇದೆ. ಇದರಿಂದ ಕೆಲವು ಜೀವಿಗಳು ವಿನಾಶದ ಅಂಚಿಗೆ ತಲುಪಬಹುದು ಎಂಬುದನ್ನು ಸಹ ಈ ಅಧ್ಯಯನ ತೋರಿಸುತ್ತದೆ’ ಎನ್ನುತ್ತಾರೆ ಚಾರ್ಲ್ ಡಾರ್ವಿನ್ ವಿಶ್ವ ವಿದ್ಯಾಲಯದ ಉಪನ್ಯಾಸಕ ವೊನಾರಸ್ಕಿ.

‘ಆಸ್ಟ್ರೇಲಿಯಾದ ದ್ವೀಪ ಸಮೂಹ ಹಾಗೂ ಗುಡ್ಡ ಪ್ರದೇಶದಲ್ಲಿ ಕಾಡು ಬೆಕ್ಕುಗಳು ಅತಿ ಹೆಚ್ಚು ಪಕ್ಷಿಗಳನ್ನು ಸಾಯಿಸಿವೆ. ಪ್ರತಿ ವರ್ಷ ಒಂದು ಚದರ ಕಿಲೋ ಮೀಟರ್‌ನಲ್ಲಿ 330 ಪಕ್ಷಿಗಳು ಬಲಿಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

‘ಬೆಕ್ಕುಗಳು ಮಧ್ಯಮ ಗಾತ್ರದ ಪಕ್ಷಿಗಳನ್ನೇ ಹೆಚ್ಚಾಗಿ ಸಾಯಿಸುತ್ತಿದ್ದು, ಮೊಟ್ಟೆ ಇಡುವ ಸಂದರ್ಭದಲ್ಲಿಯೇ ದಾಳಿ ಮಾಡುತ್ತಿವೆ’ ಎಂದು ವೊನಾರಸ್ಕಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry