ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪ್ರಬಂಧ ಪತ್ತೆಗೆ ಸಾಫ್ಟ್‌ವೇರ್‌ ಬಳಕೆ

15 ನಿಮಿಷಕ್ಕೆ 300 ಪುಟ ಪರಿಶೀಲಿಸುವ ತಂತ್ರಾಂಶ
Last Updated 5 ಅಕ್ಟೋಬರ್ 2017, 9:45 IST
ಅಕ್ಷರ ಗಾತ್ರ

ಮೈಸೂರು: ಪಿಎಚ್‌.ಡಿ ಪದವಿಗಾಗಿ ಸಲ್ಲಿಸುವ ಪ್ರೌಢಪ್ರಬಂಧಗಳಲ್ಲಿ ನಕಲಿಯನ್ನು ಪತ್ತೆ ಹಚ್ಚಲು ಮೈಸೂರು ವಿ.ವಿ ನಕಲಿ ಪತ್ತೆ ಸಾಫ್ಟ್‌ವೇರ್‌ ಅನ್ನು ಅಳವಡಿಸಿಕೊಂಡಿದೆ.

ಪಿಎಚ್‌.ಡಿ ಪ್ರಬಂಧಗಳ ಮೌಲ್ಯ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಯುಜಿಸಿ ಅನೇಕ ನಿಯಮಗಳನ್ನು ರೂಪಿಸಿದೆ. ಇದಕ್ಕಾಗಿ ಹಲವು ಕ್ರಮಗಳ ನಮ್ಮ ವಿ.ವಿ ತೆಗೆದುಕೊಂಡಿದೆ. ಅವುಗಳ ಪೈಕಿ ಪಿಎಚ್‌.ಡಿ ಪದವಿಗಾಗಿ ಪ್ರವೇಶ ಪರೀಕ್ಷೆ ಹಾಗೂ ನಂತರ ಕೋರ್ಸ್‌ ವರ್ಕ್ ನಡೆಸುವುದು. ಜತೆಗೆ, ನಕಲಿ ಪಿಎಚ್‌.ಡಿ ಪತ್ತೆಗಾಗಿ ಸಾಫ್ಟ್‌ವೇರ್‌ ಅಳವಡಿಸಿಕೊಂಡಿರುವುದು ಪ್ರಮುಖ ಎಂದು ಮೈಸೂರು ವಿ.ವಿ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟರ್ನಿಟ್‌ ಇನ್‌’ ಹಾಗೂ ‘ಐಥೆಂಟಿಕೇಟ್‌’ ಎಂಬ ಎರಡು ಸಾಫ್ಟ್‌ವೇರ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಪ್ರಬಂಧಗಳು ಇಂಗ್ಲಿಷಿನಲ್ಲಿ ಮಾತ್ರ ಇರಬೇಕಿರುವುದು ಈ ಸಾಫ್ಟ್‌ವೇರ್‌ನ ಮಿತಿ. ಕನ್ನಡದಲ್ಲಿ ಪ್ರಬಂಧ ಮಂಡಿಸಿದರೆ ಅವನ್ನು ಪರೀಕ್ಷಿಸುವ ಸೌಲಭ್ಯ ಇದರಲ್ಲಿ ಇಲ್ಲ. ಈ ಸಾಫ್ಟ್‌ವೇರ್‌ ಮೂಲಕ 300 ಪುಟಗಳ ಪ್ರಬಂಧವನ್ನು 15 ನಿಮಿಷದಲ್ಲಿ ಪರಿಶೀಲಿಸುವುದು. ಜತೆಗೆ, ನಕಲಿಯಿದ್ದರೆ ಪತ್ತೆ ಹಚ್ಚುವುದು ಎಂದು ಮಾಹಿತಿ ನೀಡಿದರು.

ಕನ್ನಡಕ್ಕೂ ಈ ಸಾಫ್ಟ್‌ವೇರ್‌ ಅಳವಡಿಸುವ ಕುರಿತು ಚಿಂತನೆ ನಡೆದಿದೆ. ಪಿಎಚ್‌ಡಿ ಪದವಿ ನೀಡುವ ಮುನ್ನ ವಿವಿಧ ಮಂಡಳಿಯ ಸದಸ್ಯರು ಹಾಗೂ ತಜ್ಞರು ನಕಲಿಯನ್ನು ಪತ್ತೆ ಮಾಡುತ್ತಿದ್ದಾರೆ. ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಯಾವ ರಾಜಿಯ ಪ್ರಶ್ನೆಯೂ ಬಾರದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT