ಬಿಸಿಯೂಟ ನೀಡಲು ಕಾರ್ಯಕರ್ತೆಯರಿಂದ ಹರಸಾಹಸ

ಮಂಗಳವಾರ, ಜೂನ್ 25, 2019
27 °C

ಬಿಸಿಯೂಟ ನೀಡಲು ಕಾರ್ಯಕರ್ತೆಯರಿಂದ ಹರಸಾಹಸ

Published:
Updated:

ಕುಣಿಗಲ್: ಮಾತೃಪೂರ್ಣ ಯೋಜನೆಯ ಪೌಷ್ಟಿಕ ಬಿಸಿಯೂಟಕ್ಕೆ ಅಂಗನವಾಡಿ ಕೇಂದ್ರಗಳಿಗೆ ಬರಲು ಬಾಣಂತಿಯರು ಮತ್ತು ಗರ್ಭಿಣಿಯರು ಸಂಕೋಚ ಪಡುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮನವೋಲಿಸಿ ಬಿಸಿಯೂಟ ನೀಡಲು ಹರಸಾಹಸ ಪಡುತ್ತಿದ್ದಾರೆ.

ಪಟ್ಟಣದ ಮತ್ತು ಕೆಲವು ಗ್ರಾಮಾಂತರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಬಾಂಣತಿಯರು ಕನಿಷ್ಠ 45 ದಿನ ಮನೆಯಿಂದ ಹೊರಬರಲಾಗದ ಸ್ಥಿತಿ ಇದೆ. ಈ ಕಾರಣ ಬಾಣಂತಿಯರ ಮನೆಗೆ ಆಹಾರ ಕಳುಹಿಸಬೇಕಾಗಿದೆ. ಇನ್ನೂ ಗರ್ಭಿಣಿಯರಿಗೆ ದಿನ ಹತ್ತಿರವಾಗುತ್ತಿದ್ದಂತೆ ಬರಲಾಗದ ಕಾರಣ ಅವರಿಗೂ ಸಹ ಮನೆಗೆ ಕಳುಹಿಸಬೇಕಾಗಿದೆ ಎಂದು ಕಾರ್ಯಕರ್ತೆಯರು ಹೇಳುತ್ತಾರೆ.

’ಕೆಲ ಮಹಿಳೆಯರು ಹಿಂದಿನ ಪದ್ಧತಿಯಂತೆ ಆಹಾರ ಸಾಮಾಗ್ರಿ ನೀಡಿ ನಾವೇ ತಯಾರು ಮಾಡಿಕೊಳ್ಳುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ. ಮಲ್ಲಿಪಾಳ್ಯದಲ್ಲಿ ಫಲಾನುಭವಿಗಳು ಆಸಕ್ತಿ ತೋರದಿದ್ದರೂ ಕಾರ್ಯಕರ್ತೆಯರು ಅಹಾರ ಸಿದ್ಧಪಡಿಸಿ ಬಾಣಂತಿಯರ ಮನೆಗೆ ತಲುಪಿಸಲು ವ್ಯವಸ್ಥೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವರು ಬರಲು ಜಾತಿ ಅಡ್ಡವಾಗಿದೆ’ ಎಂಬ ದಲಿತ ನಾರಾಯಣ್ ಅಭಿಪ್ರಾಯಪಟ್ಟರು.

ಬೋರಲಿಂಗನಪಾಳ್ಯ, ಬಿಳಿ ದೇವಾಲಯ ಮತ್ತು ಪಟ್ಟಣದ ಹೌಸಿಂಗ್ ಬೋರ್ಡ್‌ ಕಾಲೊನಿಯಲ್ಲಿ ಶೇ 50 ಭಾಗ ಯಶಸ್ವಿಯಾಗಿದೆ. ಕ್ರಮೇಣ ಸುಧಾರಣೆ ಕಂಡು ಬರುವ ವಿಶ್ವಾಸವನ್ನು ಕಾರ್ಯಕರ್ತೆಯರು ವ್ಯಕ್ತಪಡಿಸಿದ್ದಾರೆ.

’ಮಕ್ಕಳಿಗೆ ನೀಡುವ ಮೊಟ್ಟೆಯ ಹಣವನ್ನು ಮೂರು ತಿಂಗಳಾದರೂ ಕೊಟ್ಟಿಲ್ಲ. ಈಗ ಮಾತೃಪೂರ್ಣ ಯೋಜನೆಯ ತರಕಾರಿ ಮತ್ತು ಮೊಟ್ಟೆಗೂ ಹಣ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಸಿಐಟಿಯೂ ಅಧ್ಯಕ್ಷ ಗುಲ್ಜಾರ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry