ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಕರ್ನಾಟಕ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ ಆದೇಶದ ವಿರುದ್ಧದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ವಕೀಲ ಮ್ಯಾಥ್ಯೂ ಜೆ. ನೆಡುಂಪಾರ ಅವರ ಮನವಿಯನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಪರಿಶೀಲನೆ ನಡೆಸಿತು. ‘ವಕಾಲತ್‌ನಾಮೆಯಲ್ಲಿ ಸೂಚಿಸಲಾಗಿರುವ ವಕೀಲರಷ್ಟೇ ತುರ್ತು ವಿಚಾರಣೆಗೆ ಮನವಿ ಮಾಡಬಹುದು. ಈ ಅರ್ಜಿಯ ವಕಾಲತ್‌ನಾಮೆಯಲ್ಲಿ ನಿಮ್ಮ ಹೆಸರು ಇಲ್ಲದ ಕಾರಣ ಮನವಿಯನ್ನು ತಿರಸ್ಕರಿಸುತ್ತಿದ್ದೇವೆ’ ಎಂದು ಪೀಠ ಹೇಳಿತು.

ಆಗ ನೆಡುಂಪಾರ ‘ವಕೀಲರ ಕಾಯ್ದೆಯ ಪ್ರಕಾರ ವಕೀಲರು ದೇಶದ ಯಾವುದೇ ನ್ಯಾಯಾಲಯದಲ್ಲಿ ಹಾಜರಾಗಬಹುದು. ವಕಾಲತ್‌ನಾಮೆಯಲ್ಲಿ ಹೆಸರು ಇರುವ ವಕೀಲರೇ ತುರ್ತು ವಿಚಾರಣೆಗೆ ಮನವಿ ಮಾಡಬೇಕು ಎಂಬ ನಿಯಮ ತಿದ್ದುಪಡಿಯಾಗಬೇಕು’ ಎಂದು ಪ್ರತಿಪಾದಿಸಿದರು.

ಆಗ ಪೀಠವು ‘ನಿಯಮಗಳನ್ನು ರೂಪಿಸುವ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಅಧಿಕಾರವನ್ನೇ ನೀವೀಗ ಪ್ರಶ್ನಿಸುತ್ತಿದ್ದೀರಿ’ ಎಂದು ಖಾರವಾಗಿ ಹೇಳಿತು

ಇದಕ್ಕೆ ಪ್ರತಿಕ್ರಿಯೆಯಾಗಿ ‘ನ್ಯಾಯಾಂಗದ ವೃತ್ತಿಯಲ್ಲಿ ಶ್ರೇಣಿ ಪದ್ಧತಿಯೇ ಇರಬಾರದು. ವಕೀರಿಗೆ ‘ಹಿರಿಯ ವಕೀಲ’ ಎಂಬ ಪಟ್ಟ ನೀಡುವ ಪದ್ಧತಿ ಹೋಗಬೇಕು’ ಎಂದು ನೆಡುಂಪಾರ ವಾದಿಸಿದರು.

ಇದರಿಂದ ಸಿಟ್ಟಿಗೆದ್ದ ಪೀಠವು ‘ದಯವಿಟ್ಟು ಇಲ್ಲಿಂದ ಹೊರಡಿ’ ಎಂದು ನೆಡುಂಪಾರ ಅವರಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT