‘ಅಹಂಕಾರವಾಗಿ ಬದಲಾದ ಜಾತಿ ಸಂಕೇತ’

ಬುಧವಾರ, ಜೂನ್ 19, 2019
28 °C

‘ಅಹಂಕಾರವಾಗಿ ಬದಲಾದ ಜಾತಿ ಸಂಕೇತ’

Published:
Updated:
‘ಅಹಂಕಾರವಾಗಿ ಬದಲಾದ ಜಾತಿ ಸಂಕೇತ’

ಬೆಳಗಾವಿ: ಜಾತಿಗಳು ಸಣ್ಣ ಸಂಕೇತ ವಾಗುವ ಬದಲಿಗೆ ಅಹಂಕಾರವಾಗಿ ರೂಪಗೊಳ್ಳುತ್ತಿರು ವುದು ವಿಷಾದದ ಬೆಳವಣಿಗೆ ಎಂದು ಕುವೆಂಪು ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರಶಾಂತ ನಾಯಕ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಾಲಿಕೆ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಎಲ್ಲ ಸಂಸ್ಕೃತಿಗಳನ್ನೂ ಒಗ್ಗೂಡಿಸಿಕೊಂಡು ಬದುಕಬೇಕು ಎನ್ನುವ ಸಂದೇಶವನ್ನು ಮಹರ್ಷಿ ವಾಲ್ಮೀಕಿ ರಾಮಾಯಣ ಮಾಹಾಕಾವ್ಯದ ಮೂಲಕ ನೀಡಿದರು. ಭಾರತದ ಶ್ರೇಷ್ಠತೆ ಇರುವುದು ಇಲ್ಲಿನ ಪ್ರೀತಿ ವಿಶ್ವಾಸ ತುಂಬಿರುವ ಮಾತು, ಭಾಷೆ ಮತ್ತು ಮೌಲ್ಯಗಳಿಂದ. ಜಯಂತಿಗಳನ್ನು ನಮ್ಮ ಅಹಂ ತೋರಿಸುವುದಕ್ಕೆ ಆಚರಿ ಸುವುದಲ್ಲ. ಮಹಾನ್‌ ವ್ಯಕ್ತಿಗಳು ಬೋಧಿಸಿದ ತತ್ವ, ಸಿದ್ಧಾಂತ, ಆದರ್ಶ, ಜೀವನ ಮೌಲ್ಯಗಳನ್ನು ನೆನಪಿಸಿಕೊಂಡು ಅಳವಡಿಸಿಕೊಳ್ಳುವುದಕ್ಕಾಗಿ ಆಚರಿಸ ಬೇಕು ಎನ್ನುವುದನ್ನು ಮರೆಯಬಾರದು’ ಎಂದರು.

‘ಜಾತಿಯು ದಾರ್ಶನಿಕರು ಬೋಧಿಸಿದ ಸಹಕುಟುಂಬ, ಸಹ ಪರಿವಾರ ತತ್ವಕ್ಕೆ ವಿರುದ್ಧವಾಗಿವೆ. ದಾರ್ಶನಿಕರನ್ನು ದೇವರ ಸ್ವರೂಪ ದಲ್ಲಿ ಕಾಣದೇ ಅವರು ಬೋಧಿಸಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ನಮ್ಮ ಜೀವನ ಮೌಲ್ಯ, ಸಂಬಂಧಗಳನ್ನು ಕಾಪಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ರಾಮಾಯಣ ಮಹಾಕಾವ್ಯ ಜೀವನದ ಎಲ್ಲ ಮೌಲ್ಯಗಳನ್ನು ಹೊಂದಿ ರುವ ಸಮಗ್ರ ಕಾವ್ಯ. ಅದು ಆಡಳಿತದಿಂದ ಹಿಡಿದು ಕುಟುಂಬ ಜೀವನದವರೆಗೆ ಪ್ರತಿ ವ್ಯಕ್ತಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಗುರುತಿಸಿದೆ’ ಎಂದು ತಿಳಿಸಿದರು.

ಸೀಮಿತಗೊಳಿಸಬೇಡಿ: ಉದ್ಘಾಟಿಸಿದ ಸಂಸದ ಸುರೇಶ ಅಂಗಡಿ ಮಾತನಾಡಿ, ‘ವಾಲ್ಮೀಕಿ ಅವರು ಸ್ವಾಭಿಮಾನ ಮತ್ತು ಸಂಸ್ಕೃತಿಯ ಸಂಕೇತವಾಗಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ಅವರನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ’ ಎಂದು ವಿಷಾದಿಸಿದರು. ‘ರಾಮಾಯಣದಂತಹ ಮಹಾ ಕಾವ್ಯದಲ್ಲಿರುವ ಆದರ್ಶಗಳನ್ನು ಮಕ್ಕಳಿಗೆ ಕಲಿಸಬೇಕು. ಅವರ ಆದರ್ಶ ನಮಗೆಲ್ಲ ದಾರಿದೀಪವಾಗಿದೆ’ ಎಂದು ಪ್ರತಿಪಾದಿಸಿದರು.

ಸ್ವಚ್ಛತೆಗೆ ಆದ್ಯತೆ ನೀಡಿ: ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್, ‘ಎಲ್ಲರೂ ಸ್ವಚ್ಛತೆಗೆ ಗಮನಹರಿಸಬೇಕು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಶೌಚಾಲಯ ಕಟ್ಟಿಕೊಳ್ಳಲು ಸರ್ಕಾರ ನೀಡುವ ಸಹಾಯಧನ ವ್ಯರ್ಥ ವಾಗ ದಂತೆ ಕಾಳಜಿ ವಹಿಸಬೇಕು. ಶೌಚಾಲಯ ಹೊಂದುವುದನ್ನು ಪ್ರತಿಷ್ಠೆ ಮತ್ತು ಸ್ವಾಭಿಮಾನ ಎನ್ನುವಂತೆ ನೋಡಬೇಕು. ಆಗ, ಸ್ವಚ್ಛತೆ ಇದ್ದಲ್ಲಿ ದೇವರಿದ್ದಾನೆ ಎಂಬ ಭಾವನೆಗೆ ಅರ್ಥ ಬರುತ್ತದೆ’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ತಹಶೀಲ್ದಾರ್‌ ಮಂಜುಳಾ ನಾಯಕ, ನಗರಪಾಲಿಕೆ ಸದಸ್ಯೆ ಸರಳಾ ಹೇರೇಕರ ಭಾಗವಹಿಸಿದ್ದರು.

ಐವರು ಅರಣ್ಯ ಹಕ್ಕು ಫಲಾನುಭವಿಗಳಿಗೆ ಸಂಸದರು ಹಕ್ಕುಪತ್ರ ವಿತರಿಸಿದರು. ಆದರ್ಶ ಶಾಲೆ ಮಕ್ಕಳು ನಾಡಗೀತೆ ಹಾಗೂ ಪ್ರಾರ್ಥನಾಗೀತೆ ಪ್ರಸ್ತುತಪಡಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮಾ ಸಾಲಿಗೌಡರ ಸ್ವಾಗತಿಸಿದರು. ಎಸ್.ಯು. ಜಮಾದಾರ ನಿರೂಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry