ಸೋಮವಾರ, ಸೆಪ್ಟೆಂಬರ್ 16, 2019
26 °C

ಪ್ರಕಾಶ್‌ ರೈಗೇ ಶಿವರಾಮ ಕಾರಂತ ಪ್ರಶಸ್ತಿ: ಗ್ರಾಮ ಪಂಚಾಯಿತಿ ಅಚಲ

Published:
Updated:

ಬ್ರಹ್ಮಾವರ: ಕೋಟ ಡಾ.ಶಿವರಾಮ ಕಾರಂತರ ಹೆಸರಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ನೀಡುವ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನಟ ಪ್ರಕಾಶ್‌ ರೈ ಅವರಿಗೇ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್‌.ಪ್ರಮೋದ್‌ ಹಂದೆ ಸ್ಪಷ್ಟಪಡಿಸಿದ್ದಾರೆ.

ಪ್ರಶಸ್ತಿ ನೀಡಬಾರದು ಎಂದು ಕೋಟತಟ್ಟು ಪಂಚಾಯಿತಿಗೆ ಯಾವುದೇ ಮನವಿ ಬಂದಿಲ್ಲ. ಪ್ರಶಸ್ತಿ ನೀಡುವುದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರಂತ ಹುಟ್ಟೂರ ಪ್ರಶಸ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ವ್ಯವಸ್ಥಿತವಾಗಿ ಅಪಪ್ರಚಾರಗಳು ನಡೆಯುತ್ತಿರುವುದರಿಂದ ನೋವುಂಟಾಗಿದೆ ಎಂದು ಕೋಟದ ಭಗತ್ ಸಿಂಗ್‌ ಯುವ ವೇದಿಕೆ ಅಧ್ಯಕ್ಷ ಪ್ರಸಾದ್‌ ಮಣೂರು

ಕುಂದಾಪುರದ ಜೈ ಭಾರ್ಗವ ಬಳಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದು ವಿವಾದಕ್ಕೆ ಕಾರಣವಾಗಿತ್ತು.

Post Comments (+)