ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಡೇ ಅಲ್ಟ್ರಾ ಮ್ಯಾರಥಾನ್‌ ಓಟ ಇಂದಿನಿಂದ

Last Updated 6 ಅಕ್ಟೋಬರ್ 2017, 19:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪಶ್ಚಿಮಘಟ್ಟದ ಲಾಲ್‌ಬಾಗ್‌ ಎಸ್ಟೇಟ್‌ನಲ್ಲಿ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ ಓಟ ಸ್ಪರ್ಧೆ ಇದೇ 7 ಮತ್ತು 8ರಂದು ನಡೆಯಲಿದೆ. ಕೆಮ್ಮಣ್ಣುಗುಂಡಿ ಪ್ರದೇಶದ ಎಸ್ಟೇಟ್‌ನಲ್ಲಿ ಶನಿವಾರ ಬೆಳಿಗ್ಗೆ 6.15ಕ್ಕೆ ಓಟಕ್ಕೆ ಚಾಲನೆ ನೀಡಲಾಗುವುದು. ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದೆ.

110 ಕಿ.ಮೀ ಸ್ಪರ್ಧೆಗೆ 24 ಗಂಟೆ, 80 ಕಿ.ಮೀ–16 ಗಂಟೆ ಹಾಗೂ 50 ಕಿ.ಮೀ–  ಒಂಬತ್ತು ಗಂಟೆ ನಿಗದಿಪಡಿಸಲಾಗಿದೆ. 110 ಕಿ.ಮೀ ಪೂರೈಸಿದವರಿಗೆ ಐದು; 80 ಕಿ.ಮೀ ಪೂರ್ಣಗೊಳಿಸಿದವರಿಗೆ ನಾಲ್ಕು;   50 ಕಿ.ಮೀ ಪೊರೈಸಿದವರಿಗೆ ಮೂರು ಅಂಕ ಲಭಿಸುತ್ತದೆ. ಈ ಅಲ್ಟ್ರಾಕೂಟವನ್ನು ಒಂದು ಹಂತದ ಪರ್ವತ ಅಲ್ಟ್ರಾ ಮ್ಯಾರಥಾನ್‌ನ ಅರ್ಹತಾ ಕೂಟ ಎಂದು ಪರಿಗಣಿಸಲಾಗುತ್ತದೆ.

ದೇಶವಿದೇಶಗಳ 441 ಓಟಗಾರರು ಸ್ಪರ್ಧೆಗೆ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 36 ಮಹಿಳೆಯರು ಇದ್ದಾರೆ. ಜರ್ಮನಿ, ಅಮೆರಿಕ, ಇಂಗ್ಲೆಂಡ್, ಕೊರಿಯಾ, ಚೀನಾ, ಫ್ರಾನ್ಸ್, ಯುಎಇ ದೇಶಗಳ 18 ಮಂದಿ ಇದ್ದಾರೆ. ಕಾಫಿ ನಾಡಿನ ಮಲೆನಾಡು ಪ್ರದೇಶದಲ್ಲಿ ನಡೆಯುವ ಈ ಸ್ಪರ್ಧೆಯು ಮ್ಯಾರಥಾನ್ ಪಟುಗಳಿಗೆ ವಿಶಿಷ್ಟ ಅನುಭವ ನೀಡಲಿದೆ.

ಅತ್ಯಂತ ಸವಾಲಿನ 110 ಕಿ.ಮೀ ಓಟಕ್ಕೆ 124 ಮಂದಿ, 80 ಕಿ.ಮೀ ಓಟಕ್ಕೆ 60 ಹಾಗೂ 50 ಕಿ.ಮೀ ಸ್ಪರ್ಧೆಗೆ 257 ಸ್ಪರ್ಧಿಗಳು ನೋಂದಣಿ ಮಾಡಿಸಿದ್ದಾರೆ. 110 ಕಿ. ಮೀ ವಿಭಾಗದಲ್ಲಿ 6, 80 ಕಿ.ಮೀ ವಿಭಾಗದಲ್ಲಿ 5 ಮತ್ತು 50 ಕಿ.ಮೀ ವಿಭಾಗದಲ್ಲಿ 25 ಮಹಿಳೆಯರು ಇದ್ದಾರೆ.

ಕರ್ನಾಟಕದಿಂದ 181, ಮಹಾರಾಷ್ಟ್ರ- 49, ತಮಿಳುನಾಡು- 41, ಕೇರಳ-35, ಗೋವಾ- 20, ತೆಲಂಗಾಣ-12, ಗುಜರಾತ್- 11, ದೆಹಲಿ-4, ಆಂಧ್ರಪ್ರದೇಶ, ರಾಜಸ್ತಾನ, ಒಡಿಶಾ, ಪಶ್ಚಿಮಬಂಗಾಳ, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶದಿಂದ ತಲಾ ಇಬ್ಬರು, ಅಸ್ಸಾಂ, ಬಿಹಾರ, ಪುದುಚೇರಿಯಿಂದ ತಲಾ ಒಬ್ಬರು ನೋಂದಣಿ ಮಾಡಿಸಿದ್ದಾರೆ. ಕಳೆದ ವರ್ಷ 86 ಓಟಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT