ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಧನ ಹೆಚ್ಚಳಕ್ಕೆ ಸಿಎಂ ಜತೆ ಚರ್ಚೆ: ಎಂ.ಬಿ.ಪಾಟೀಲ

Last Updated 7 ಅಕ್ಟೋಬರ್ 2017, 10:30 IST
ಅಕ್ಷರ ಗಾತ್ರ

ವಿಜಯಪುರ: ‘ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರದ ಆರೋಗ್ಯ ಯೋಜನೆಗಳು ಜನತೆಗೆ ಮುಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಶಂಸನಾರ್ಹವಾಗಿದೆ’ ಎಂದು ಹೇಳಿದರು.

‘ಆಶಾಗಳ ಪರ ಸಚಿವ ಸಂಪುಟದಲ್ಲಿ ಧ್ವನಿ ಎತ್ತುವ ಜತೆಗೆ ಮುಖ್ಯಮಂತ್ರಿ ಮನವೊಲಿಸಿ ಮಾಸಿಕ ಆರು ಸಾವಿರ ರೂಪಾಯಿ ವೇತನ ದೊರೆಯುವಂತೆ ಮಾಡುತ್ತೇನೆ. 48 ಗಂಟೆಗಳಲ್ಲಿ ಜಿಲ್ಲೆಯ ಆಸ್ಪತ್ರೆಯಲ್ಲಿ ಆಶಾಗಳಿಗೆ ಒಂದು ಕೊಠಡಿ ಕೊಡಲಾಗುವುದು’ ಎಂದು ತಿಳಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ,ಸೋಮಶೇಖರ ಯಾದಗಿರಿ ಮಾತನಾಡಿ ‘ಕಳೆದ ತಿಂಗಳು ನಡೆಸಿದ ರಾಜ್ಯ ಮಟ್ಟದ ಹೋರಾಟದಿಂದ ರಾಜ್ಯ ಸರ್ಕಾರ ಪ್ರತಿ ತಿಂಗಳಿಗೆ ₹ 3.500 ವೇತನ ನಿಗದಿ ಪಡಿಸಿದೆ. ಆಶಾ ಸ್ವಸಹಾಯ ಸಂಘಗಳ ಮೂಲಕ ₹ 2 ಲಕ್ಷದವರೆಗೂ ಸಾಲ ಕೊಡುವ ಯೋಜನೆ ಘೋಷಿಸಿದೆ. ಇನ್ನುಳಿದ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮುಂದುವರೆಸಬೇಕಿದೆ’ ಎಂದು ಹೇಳಿದರು.

ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಅಂಜನಾ ಕುಂಬಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ, ಅಂಬಿಕಾ ವಳಸಂಗ, ಮಧು ಬಾಗೋಜಿ, ಮೈತ್ರಾ ಪಾಟೀಲ, ಈರಮ್ಮ, ಲಕ್ಮೀ ಸುಮಂಗಲಾ, ರಿಯಾನಾ, ಮಾಲಶ್ರೀ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT