ಶನಿವಾರ, ಸೆಪ್ಟೆಂಬರ್ 21, 2019
24 °C

ಕಿತ್ತೂರು ಪಂಚಾಯ್ತಿಗೆ ಗಾಂಧಿ ಗ್ರಾಮ ಪ್ರಶಸ್ತಿ

Published:
Updated:

ರಾಮದುರ್ಗ: ತಾಲ್ಲೂಕಿನ ಕಿತ್ತೂರು ಗ್ರಾಮ ಪಂಚಾಯ್ತಿಯು 2016–17 ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಗಳ ಯಶಸ್ವಿ ಜಾರಿ ಹಾಗೂ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಅಭಿಯಾನದಲ್ಲಿನ ಸಾಧನೆ ಪರಿಗಣಿಸಿ ಸರ್ಕಾರ ಈ ಪುರಸ್ಕಾರ ನೀಡಿದೆ.

ಇದೇ ತಿಂಗಳ 2ರಂದು ಬೆಂಗಳೂರಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಪ್ರಶಸ್ತಿ ಪ‍್ರದಾನ ಮಾಡಿದರು.

ಕಿತ್ತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಎಂ. ಕಂಬಳಿ, ಉಪಾಧ್ಯಕ್ಷೆ ಸಿದ್ದವ್ವ ಚಂದರಗಿ, ಪಿಡಿಒ ಮಹಾಂತೇಶ ಬಳ್ಳಾರಿ ಅವರಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. 

Post Comments (+)