ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾದಾಪುರ ಕೆರೆಗೆ ವರದಾ ನೀರು ಶೀಘ್ರ’

Last Updated 8 ಅಕ್ಟೋಬರ್ 2017, 7:06 IST
ಅಕ್ಷರ ಗಾತ್ರ

ಸವಣೂರ: ‘ಮೂರು ತಿಂಗಳಲ್ಲಿ ಮಾದಾಪುರ ಕೆರೆಗೆ ವರದಾ ನದಿಯಿಂದ ನೀರು ಬಿಡಲಾಗುವುದು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ತಾಲ್ಲೂಕಿನ ಮಾದಾಪೂರ ಗ್ರಾಮದ ಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ‘ಕೆರೆಗೆ ನೀರು ತುಂಬಿಸಲು ಕಾಲುವೆ ನಿರ್ಮಾಣ ಕಾಮಗಾರಿಗೆ ₹30ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಎರಡು ವಾರಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆ, ಕಟ್ಟೆಗಳು ತುಂಬಿವೆ. ರೈತರ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿವೆ. ಅದರೊಂದಿಗೆ ಕೆರೆಗಳೂ ತುಂಬುತ್ತಿವೆ.ಆದರೆ, ಜನರು ಕೆರೆಗಳ ನೀರನ್ನು ಮಲೀನ ಮಾಡದೆ ಸ್ವಚ್ಛತೆ ಕಾಯ್ದುಕೊಳ್ಳಬೇಕು’ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರೀಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ ಸಾಲಿಮಠ, ತಾಲ್ಲೂಕು ಘಟಕದ ಅಧ್ಯಕ್ಷ ಗಾಳೇಪ್ಪ ದೊಡ್ಡಪೂಜಾರ,ಎಪಿಎಂಸಿ ಸದಸ್ಯ ಮಲ್ಲಿಕಾರ್ಜುನ ಸೊಪ್ಪಿನ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೀಲವ್ವ ಹೂಗಾರ, ಸದಸ್ಯ ವೀರನಗೌಡ ಪಾಟೀಲ, ಸುಲೇಮಾನ ಮೋಮಿನ್, ಶಿವಾನಂದ ಮಡಿವಾಳ, ಶಾಂತಯ್ಯ ಪೂಜಾರ, ಅಂಜುಮ್‌ ವಾಲಿಕಾರ,ಗಿರಿಜವ್ವ, ನೂರ್‌ಅಹ್ಮದ್ ಶಿಗ್ಗಾವಿ, ಮುಖಂಡರಾದ ಹನೀಫ್‌ಸಾಬ್, ರಾಮಣ್ಣ ಮೋತೆ ಇದ್ದರು.

ಕಳಗೊಂಡ ಕೆರೆಗೆ ಬಾಗಿನ ಅರ್ಪಣೆ
ಹಿರೇಕೆರೂರ: ಮಳೆಯಿಂದ ತುಂಬಿರುವ ತಾಲ್ಲೂಕಿನ ಕಳಗೊಂಡ ಗ್ರಾಮದ ಕೆರೆಗೆ ಶುಕ್ರವಾರ ಶಾಸಕ ಯು.ಬಿ.ಬಣಕಾರ ಬಾಗಿನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ‘ಮೂರ್ನಾಲ್ಕು ವರ್ಷಗಳ ಸತತ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದರು.

ಇದೀಗ ಸತತ ಮಳೆಯಿಂದ ಹಲವು ವರ್ಷಗಳ ಬಳಿಕ ತಾಲ್ಲೂಕಿನ ಕೆರೆ, ಕಟ್ಟೆಗಳು ತುಂಬಿವೆ. ಕೆರೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಕೊಳವೆ ಬಾವಿ ಹೊಂದಿರುವ ರೈತರಿಗೆ ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ ಮುದಿಗೌಡ್ರ, ಹನುಮಂತಪ್ಪ ಕೆಂಚಣ್ಣನವರ, ಗಣೇಶಪ್ಪ ನಿಂಬೆಗೊಂದಿ, ಹೂವನಗೌಡ ಮಳವಳ್ಳಿ, ಷಣ್ಮುಖಪ್ಪ ಮುದಿಗೌಡ್ರ, ಕೆ.ಸಿ.ಮುದಿಗೌಡ್ರ, ನಾಗರಾಜ ಮುದಿಗೌಡ್ರ, ಕರಬಸಪ್ಪ ಹುಲ್ಲಿನಕೊಪ್ಪ, ಪರಮೇಶಪ್ಪ ಯಡಚಿ, ಗಣೇಶ ದೊಡ್ಮನಿ, ಲಕ್ಷ್ಮಣ ಕಡೇಮನಿ, ಸುರೇಶ ಮತ್ತೂರ, ಚನಬಸಪ್ಪ ದಂಡಗೀಹಳ್ಳಿ, ನಾಗಪ್ಪ ಬಂಗೇರ, ಕೃಷ್ಣಪ್ಪ ಹುಲ್ಲತ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT