ಮಂಗಳವಾರ, ಸೆಪ್ಟೆಂಬರ್ 17, 2019
24 °C

ಉರುಳಿಗೆ ಸಿಲುಕಿ ಚಿರತೆ ಸಾವು

Published:
Updated:

ಬಂಟ್ವಾಳ: ತಾಲ್ಲೂಕಿನ ಕೊಡ್ಮಾಣ್ ಸಮೀಪದ ನಡುಬೈಲು ಎಂಬಲ್ಲಿ ಗದ್ದೆ ಬದಿ ಇರುವ ಗುಡ್ಡವೊಂದರಲ್ಲಿ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿದೆ. ಮುಳ್ಳುಹಂದಿ ಮತ್ತು ಕಾಡು ಹಂದಿ ಹಿಡಿಯಲು ಸ್ಥಳೀಯರು ಗುಡ್ಡ ಪ್ರದೇಶದಲ್ಲಿ ಉರುಳು ಇಟ್ಟಿದ್ದು, ಶುಕ್ರವಾರ ತಡರಾತ್ರಿ ಆಹಾರ ಹುಡುಕಿಕೊಂಡು ಬಂದಿದ್ದ ಚಿರತೆ, ಈ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ.

ಸುತ್ತಲೂ ಅರಣ್ಯ ಪ್ರದೇಶ ಹೊಂದಿರುವ ಇಲ್ಲಿ ಮನೆಗಳ ಸಂಖ್ಯೆ ವಿರಳವಾಗಿದ್ದು, ಶನಿವಾರ ಬೆಳಿಗ್ಗೆ ಇದನ್ನು ಕಂಡ ಸ್ಥಳೀಯರು, ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಕುಮಾರ್ ನೇತೃತ್ವದ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

Post Comments (+)