ಕಾಲೇಜಿನ ಕಾಂಪೌಂಡ್ ಕುಸಿತ

ಶುಕ್ರವಾರ, ಜೂನ್ 21, 2019
22 °C

ಕಾಲೇಜಿನ ಕಾಂಪೌಂಡ್ ಕುಸಿತ

Published:
Updated:

ರಾಮನಗರ: ಭಾರಿ ಮಳೆಯಿಂದಾಗಿ ಪಿಡಬ್ಲ್ಯುಡಿ ವೃತ್ತದ ಬಳಿ ಇರುವ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಕಾಂಪೌಂಡ್‌ ಕುಸಿದಿದೆ. ಎಸ್ಪಿ ಕಚೇರಿಗೆ ಹೊಂದಿಕೊಂಡಂತೆ ಇರುವ ಎಡಭಾಗದಲ್ಲಿ ಸುಮಾರು 50 ಅಡಿ ಉದ್ದದಷ್ಟು ಗೋಡೆಯು ಶಿಥಿಲಗೊಂಡಿತ್ತು. ಶುಕ್ರವಾರ ಸಂಜೆ ತೀವ್ರ ಮಳೆಯ ಹಿನ್ನೆಲೆಯಲ್ಲಿ ಕೆಳಗೆ ಕುಸಿದು ಬಿತ್ತು.

ಇಟ್ಟಿಗೆ ಮೊದಲಾದ ಅವಶೇಷಗಳು ರಸ್ತೆಯಲ್ಲಿ ಬಿದ್ದ ಕಾರಣ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಆಯಿತು. ನಂತರದಲ್ಲಿ ರಸ್ತೆಯಲ್ಲಿನ ಅವಶೇಷಗಳನ್ನು ತೆರವು ಮಾಡಿ ಓಡಾಟಕ್ಕೆ ಅನುವು ಮಾಡಿಕೊಡಲಾಯಿತು.

‘ಇದೇ ಹಾದಿಯಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಓಡಾಡುತ್ತಿರುತ್ತೇವೆ. ತರಗತಿಗಳು ಇದ್ದ ಸಂದರ್ಭದಲ್ಲಿ ಬಿದ್ದಿದ್ದರೆ ಅನಾಹುತ ಆಗುತಿತ್ತು. ಸುತ್ತಲಿನ ಕಾಂಪೌಂಡ್‌ ಪೂರ ಶಿಥಿಲಗೊಂಡಿದ್ದು, ಪೂರ್ತಿ ಕೆಡವಿ ಹೊಸತಾಗಿ ಗೋಡೆಗಳನ್ನು ನಿರ್ಮಿಸಬೇಕು’ ಎಂದು ಕಾಲೇಜಿನ ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry