7

ಸಖತ್‌ ಸದ್ದು ಮಾಡುತ್ತಿರುವ 2.0 ಸಿನಿಮಾದ ಮೇಕಿಂಗ್‌ ವಿಡಿಯೊ

Published:
Updated:
ಸಖತ್‌ ಸದ್ದು ಮಾಡುತ್ತಿರುವ 2.0 ಸಿನಿಮಾದ ಮೇಕಿಂಗ್‌ ವಿಡಿಯೊ

ಮುಂಬೈ: ಸೂಪರ್ ಸ್ಟಾರ್‌ ರಜನಿಕಾಂತ್‌ ಅಭಿನಯದ 2.0 ಸಿನಿಮಾದ ಮೇಕಿಂಗ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಯುಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಮೇಕಿಂಗ್ ವಿಡಿಯೊಗೆ ಒಂದು ಕೋಟಿಗೂ ಹೆಚ್ಚು ಹಿಟ್‌ಗಳು ದೊರೆತಿವೆ.

ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಸೇರಿದಂತೆ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಹಾಗೂ ನಾಯಕಿಯಾಗಿ ಹಾಲಿವುಡ್‌ನ ಆ್ಯಮಿ ಜಾಕ್ಸನ್‌ ಅಭಿನಯಿಸಿದ್ದಾರೆ. ಎ.ಆರ್‌. ರೆಹಮಾನ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ರೋಬೊಟ್‌ ಸಿನಿಮಾದ ಮುಂದುವರೆದ ಭಾಗವೇ 2.0 ಎಂದು ಶಂಕರ್ ತಿಳಿಸಿದ್ದಾರೆ.

ಇಲ್ಲಿಯವರೆಗೂ ಚಿತ್ರಿಕರಣಕ್ಕೆ ಸುಮಾರು 400 ಕೋಟಿ ರೂಪಾಯಿ ವೆಚ್ಚವಾಗಿದೆ. ಬರುವ 27ರಂದು ದುಬೈನಲ್ಲಿ ಈ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಿನಿಮಾವನ್ನು ಹಾಲಿವುಡ್ ಮಾದರಿಯಲ್ಲಿ ಚಿತ್ರಿಕರಿಸಲಾಗುತ್ತಿದ್ದು‌ 3ಡಿ ಕ್ಯಾಮೆರಾಗಳನ್ನು ಬಳಸಲಾಗಿದೆ. ವಿದೇಶಿ ತಂತ್ರಜ್ಞರ ನೆರವು ಪಡೆಯಲಾಗಿದೆ ಎಂದು ಚಿತ್ರತಂಡ ಹೇಳಿದೆ.

2018ರ ಜನವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇಂಗ್ಲಿಷ್, ತಮಿಳು,ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಏಕಕಾಲದಲ್ಲೇ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry