ಈಜು: ರಾಜ್ಯದ ಶ್ರೀಹರಿ ನಟರಾಜ್ ಕೂಟ ದಾಖಲೆ

ಗುರುವಾರ , ಜೂನ್ 20, 2019
24 °C

ಈಜು: ರಾಜ್ಯದ ಶ್ರೀಹರಿ ನಟರಾಜ್ ಕೂಟ ದಾಖಲೆ

Published:
Updated:
ಈಜು: ರಾಜ್ಯದ ಶ್ರೀಹರಿ ನಟರಾಜ್ ಕೂಟ ದಾಖಲೆ

ಬೆಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್ ಭೋಪಾಲ್‌ನಲ್ಲಿ ನಡೆಯುತ್ತಿರುವ 71ನೇ ಗ್ಲೆನ್‌ಮಾರ್ಕ್ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಪುರುಷರ 50ಮೀ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ 26.58 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ರಾಂಚಿಯಲ್ಲಿ 2016ರಲ್ಲಿ ಪಿ.ಎಸ್ ಮಧು (26.73) ನಿರ್ಮಿಸಿದ್ದ ದಾಖಲೆಯನ್ನು ಅವರು ಅಳಿಸಿಹಾಕಿದರು.

ಸಲೋನಿ ದಲಾಲ್ (2:45.16) ಮಹಿಳೆಯರ 200ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ, ಸುವಾನ ಸಿ. ಭಾಸ್ಕರ್‌ (31.82ಸೆ) ಮಹಿಳೆಯರ 50ಮೀ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ.

4X100ಮೀ ಮೆಡ್ಲೆ ವಿಭಾಗದಲ್ಲಿ ಕರ್ನಾಟಕದ ಮಹಿಳೆಯರ ತಂಡ (4:41.70) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದೆ.

ರಾಜ್ಯ ತಂಡದಲ್ಲಿ ಸುವಾನ, ಸಲೋನಿ, ದಾಮಿನಿ ಗೌಡ ಹಾಗೂ ವಿ. ಮಾಳವಿಕಾ ಇದ್ದರು. ಪರುಷರ 4X100ಮೀ ಮೆಡ್ಲೆ ವಿಭಾಗದಲ್ಲಿ ರಾಜ್ಯ ತಂಡ ಕಂಚು ಗೆದ್ದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry