ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಚರ್ಡ್‌ ಥೇಲರ್‌ಗೆ ಅರ್ಥಶಾಸ್ತ್ರ ನೊಬೆಲ್

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅರ್ಥ ಶಾಸ್ತ್ರಜ್ಞ ರಿಚರ್ಡ್ ಥೇಲರ್ (72) ಅವರಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಸಂದಿದೆ. ಅರ್ಥಶಾಸ್ತ್ರ ಹಾಗೂ ಮನಶಾಸ್ತ್ರಗಳ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಮಾಡಿದ ಕೆಲಸವನ್ನು ಗುರುತಿಸಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

‘ಸೀಮಿತ ವಿಚಾರಪರತೆ, ಸಾಮಾಜಿಕ ಆದ್ಯತೆಗಳು ಹಾಗೂ ಸ್ವಯಂ ನಿಯಂತ್ರಣದ ಕೊರತೆಯ ಪರಿಣಾಮಗಳನ್ನು ಅನ್ವೇಷಿಸುವ ಮೂಲಕ, ಮನುಷ್ಯನ ಈ ಲಕ್ಷಣಗಳು ವ್ಯವಸ್ಥಿತವಾಗಿ ವೈಯಕ್ತಿಕ ನಿರ್ಧಾರಗಳು ಹಾಗೂ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಅವರು ತೋರಿಸಿದ್ದಾರೆ’ ಎಂದು ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವೇಗವಾಗಿ ಮತ್ತು ವ್ಯಾಪಕವಾಗಿ ಬೆಳೆಯುತ್ತಿರುವ ಮನಶಾಸ್ತ್ರ ಅರ್ಥ ಶಾಸ್ತ್ರ ಕ್ಷೇತ್ರದ ವಿಸ್ತರಣೆಗೆ  ರಿಚರ್ಚ್‌ ಅವರ ಪ್ರಾಯೋಗಿಕ ಸಂಶೋಧನೆಗಳು ಮತ್ತು ಸೈದ್ಧಾಂತಿಕ ಒಳನೋಟಗಳು ಸಹಾಯಕವಾಗಿವೆ ಎಂದು ಸಮಿತಿ ಹೇಳಿದೆ.

ಪ್ರಶಸ್ತಿ ಮೊತ್ತವಾಗಿ ಇವರು ₹ 7.2 ಕೋಟಿ ಪಡೆಯಲಿದ್ದಾರೆ. ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರಿಚರ್ಡ್, 2015ರಲ್ಲಿ 'ದಿ ಬಿಗ್ ಶಾರ್ಟ್' ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT