ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತರೂ ಮನಗೆದ್ದ ಭಾರತ ಯುವ ಪಡೆ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪಂದ್ಯದುದ್ದಕ್ಕೂ ಅಪ್ರತಿಮ ಸಾಮರ್ಥ್ಯ ತೋರಿದ ಭಾರತ ಯುವ ಪಡೆ ಕೊನೆಯಲ್ಲಿ ಸೋಲಿನ ಸುಳಿಯಲ್ಲಿ ಬಿದ್ದಿತು. ಆದರೆ ಫುಟ್‌ಬಾಲ್ ಜಗತ್ತಿನ ಗಮನ ಸೆಳೆಯಿತು. ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಕೊಲಂಬಿಯಾ ಎದುರು ಭಾರತ ತಂಡ 1–2 ಗೋಲುಗಳ ಸೋಲೊಪ್ಪಿಕೊಂಡಿತು.

ಕೊಲಂಬಿಯಾ ಪರ ಜೆ. ಪೆನಲೋಜಾ 49 ಮತ್ತು 83ನೇ ನಿಮಿಷದಲ್ಲಿ ಗೋಲು ಗಳಿಸಿದರೆ 82ನೇ ನಿಮಿಷದಲ್ಲಿ ಗೋಲು ಗಳಿಸಿದ ಜೀಕ್ಸನ್‌ ಭಾರತದ ಪರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು.

ಅಮೆರಿಕಕ್ಕೆ ಗೆಲುವು: ಅಮೆರಿಕ ತಂಡದವರು ಕೂಟದಲ್ಲಿ ಎರಡನೇ ಗೆಲುವು ಗಳಿಸಿದರು. ಸೋಮವಾರ ನಡೆದ ಪಂದ್ಯದಲ್ಲಿ ಅಮೆರಿಕ 1–0 ಗೋಲಿನಿಂದ ಘನಾ ತಂಡವನ್ನು ಮಣಿಸಿ ನಾಕೌಟ್‌ ಹಂತಕ್ಕೆ ಲಗ್ಗೆ ಇಟ್ಟಿತು. ವಿಜಯಿ ತಂಡದ ಅಯೊ ಅಕಿನೊಲಾ 75ನೇ ನಿಮಿಷದಲ್ಲಿ ಗೋಲು ಗಳಿಸಿ ಮಿಂಚಿದರು.

ಮುಂಬೈನ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮಾಲಿ 3–0 ಗೋಲುಗಳಿಂದ ಟರ್ಕಿ ಸವಾಲು ಮೀರಿ ನಿಂತಿತು. ಪರುಗ್ವೆ ತಂಡ 4–2 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT