ಸಂಭ್ರಮದಿಂದ ಸಂಸ್ಕಾರೋತ್ಸವ ಆಚರಣೆ

ಗುರುವಾರ , ಜೂನ್ 27, 2019
23 °C

ಸಂಭ್ರಮದಿಂದ ಸಂಸ್ಕಾರೋತ್ಸವ ಆಚರಣೆ

Published:
Updated:
ಸಂಭ್ರಮದಿಂದ ಸಂಸ್ಕಾರೋತ್ಸವ ಆಚರಣೆ

ಬೆಂಗಳೂರು: ಅಖಿಲ ಹವ್ಯಕ ಮಹಾಸಭಾವು ನಗರದಲ್ಲಿ ಆಯೋಜಿಸಿದ್ದ ‘ಸಂಸ್ಕಾರೋತ್ಸವ’ವನ್ನು ಸಮುದಾಯದ ಸದಸ್ಯರು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ವಿನಾಯಕನ ಪೂಜೆ ನೆರವೇರಿಸಿ ಮತ್ತು ಅಮೃತಬಳ್ಳಿ ನೆಡುವ ಮೂಲಕ ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತರು ಉತ್ಸವಕ್ಕೆ ಚಾಲನೆ ನೀಡಿದರು.

‘ಉತ್ಸವಗಳು ಉತ್ಸಾಹದ ದ್ಯೋತಕವಾಗಿವೆ. ಅವುಗಳಿಂದ ಸಂಸ್ಕೃತಿಯ ಸಂಸ್ಕಾರಗಳು ನೆನಪಾಗುತ್ತವೆ. ಹವ್ಯಕ ಸಮುದಾಯದಲ್ಲಿನ ಸತ್‌ ಸಂಸ್ಕಾರಗಳನ್ನು ಸಮಾಜಕ್ಕೆ ಪರಿಚಯಿಸಲು ಇಂತಹ ಉತ್ಸವಗಳು ಅಗತ್ಯ’ ಎಂದು ಹೊಸ್ತೋಟ ಮಂಜುನಾಥ ಹೇಳಿದರು.

ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ್‌ ಕಜೆ, ‘ಹವ್ಯಕರು ಹುಟ್ಟಿನಿಂದಲೇ ಸಂಸ್ಕಾರಗಳನ್ನು ಪಡೆದುಕೊಂಡು ಬರುತ್ತಾರೆ. ಅವುಗಳನ್ನು ಬೆಳೆಸಲು, ಜಾಗೃತಗೊಳಿಸಲು ಉತ್ಸವ ಆಯೋಜಿಸಲಾಗಿದೆ. ಮನುಜನಲ್ಲಿ ಸಂಸ್ಕಾರದ ಬೇರುಗಳು ಗಟ್ಟಿಯಾಗಿದ್ದಾಗಲೇ, ಜೀವನವೆಂಬ ಮರ ಸಮೃದ್ಧವಾಗಿರುತ್ತದೆ’ ಎಂದರು.

ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಜಗದೀಶ ಶರ್ಮ, ಡಾ. ಹಿತ್ಲಳ್ಳಿ ಸೂರ್ಯನಾರಾಯಣ್ ಭಟ್, ಕೂಟೇಲು ರಾಮಕೃಷ್ಣ ಭಟ್ ಅವರು ಹವ್ಯಕರ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು.

ಕಲಾವಿದ ರಾಘವೇಂದ್ರ ಹೆಗಡೆ ಬಿಡಿಸಿದ ಮರಳು ಚಿತ್ರಗಳು, ಜಯಲಕ್ಷ್ಮಿ ಭಟ್ ಮತ್ತು ತಂಡದ ಸಂಗೀತ ಕಾರ್ಯಕ್ರಮ, ಮೋಹನ್‌ ಭಾಸ್ಕರ ಹೆಗಡೆ ತಂಡ ಪ್ರಸ್ತುತಪಡಿಸಿದ ಕರ್ಮಬಂಧ ತಾಳಮದ್ದಲೆ ಸಭಿಕರ ಮನಗೆದ್ದವು. ಹವ್ಯಕರ ಸಾಂಪ್ರದಾಯಿಕ ಅಡುಗೆಯ ತಿನಿಸುಗಳ ರುಚಿಯನ್ನು ಜನರು ಸವಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry