ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ದಾಖಲೆ ಬರೆದ ಶ್ರೀಹರಿ

Last Updated 9 ಅಕ್ಟೋಬರ್ 2017, 19:48 IST
ಅಕ್ಷರ ಗಾತ್ರ

ಭೋಪಾಲ್‌: ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್‌ ಅವರ ‍ಪ್ರಾಬಲ್ಯ ಮುಂದುವರಿದಿದೆ.

ಸೋಮವಾರ ನಡೆದ ಪುರುಷರ 200 ಮೀಟರ್ಸ್‌ ಬ್ಯಾಕ್‌ ಸ್ಟ್ರೋಕ್‌ನಲ್ಲಿ ಶ್ರೀಹರಿ 2 ನಿಮಿಷ 03.89 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡರು.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು 2 ನಿಮಿಷ 04.11ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.
ಇಲ್ಲಿ ಚಿನ್ನ ಗೆದ್ದ ಶ್ರೀಹರಿ ಮುಂದಿನ ವರ್ಷ ಅರ್ಜೆಂಟೀನಾದಲ್ಲಿ ನಡೆಯುವ ಯುವ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.

100ಮೀಟರ್ಸ್‌ ಬಟರ್‌ ಫ್ಲೈನಲ್ಲಿ ಸ್ಪರ್ಧಿಸಿದ್ದ ಅವಿನಾಶ್‌ ಮಣಿ (55.68ಸೆ.) ಕಂಚಿಗೆ ತೃಪ್ತಿಪಟ್ಟರು.

ಮಾಳವಿಕಾಗೆ ಚಿನ್ನ: ಮಹಿಳೆಯರ 1,500 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ರಾಜ್ಯದ ಸವಾಲು ಎತ್ತಿಹಿಡಿದಿದ್ದ ವಿ.ಮಾಳವಿಕಾ ಚಿನ್ನಕ್ಕೆ ಮುತ್ತಿಕ್ಕಿದರು. ಅವರು ನಿಗದಿತ ದೂರ ಕ್ರಮಿಸಲು 17 ನಿಮಿಷ 58.08 ಸೆಕೆಂಡು ತೆಗೆದುಕೊಂಡರು. ರಾಜ್ಯದವರೇ ಆದ ಖುಷಿ ದಿನೇಶ್‌ (18:24.35ಸೆ.) ಕಂಚು ತಮ್ಮದಾಗಿಸಿಕೊಂಡರು.

ಕರ್ನಾಟಕ ತಂಡ 4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೇ ಮತ್ತು 4X50 ಮೀಟರ್ಸ್‌ ಮಿಶ್ರ ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಸಾಧನೆ ತೋರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT