ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಪಡಿಸಿ

Last Updated 10 ಅಕ್ಟೋಬರ್ 2017, 5:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ ತಾಲ್ಲೂಕಿನ ಚದುಲಪುರದಲ್ಲಿ ರಸ್ತೆ ಗುಂಡಿಗಳು ಬಿದ್ದು ಹಾಳಾಗಿ ಹೋಗಿದ್ದು ಜನರು ಹದಗೆಟ್ಟ ರಸ್ತೆಯಿಂದಾಗಿ ಪರಿತಪಿಸುವಂತಾಗಿದೆ. ಜೋರಾಗಿ ಮಳೆ ಸುರಿದರೆ ರಸ್ತೆ ಗುಂಡಿಗಳಲ್ಲಿ ನೀರು ಮಡುಗಟ್ಟುತ್ತದೆ. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ದಿಪಡಿಸಬೇಕು. ಮುನಿನಾರಾಯಣ, ಚದುಲಪುರ ನಿವಾಸಿ ದಾರಿ ಸರಿಪಡಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಹಳ್ಳಿಯಲ್ಲಿ ರೈಲ್ವೆ ಕೆಳ ಸೇತುವೆ ದಾರಿಯಲ್ಲಿ ರಸ್ತೆ ಟಾರು ಕಿತ್ತು ಹಾಳಾಗಿದ್ದು, ಇದೇ ದಾರಿಯಲ್ಲಿ ಗಿಡಗಂಟಿಗಳು ಬೆಳೆದು ರಸ್ತೆ ಆವರಿಸಿಕೊಳ್ಳುತ್ತಿವೆ.

ಇದರಿಂದ ರಸ್ತೆ ಕಿರಿದಾಗುವ ಜತೆಗೆ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿದೆ. ಜೋರಾಗಿ ಮಳೆ ಸುರಿದರೆ ಕೆಳ ಸೇತುವೆಯಲ್ಲಿ ಅಡಿಗಟ್ಟಲೇ ನೀರು ಮಡುಗಟ್ಟಿ ನಿಂತು ಪಾದಚಾರಿಗಳು, ಸವಾರರು ತೀವ್ರ ತೊಂದರೆ ಎದುರಿಸುತ್ತಾರೆ.

ಅನೇಕ ಬಾರಿ ಬಾರಿ ಈ ದಾರಿಯನ್ನು ಸುಸಜ್ಜಿತಗೊಳಿಸಿ ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಈ ರಸ್ತೆಯನ್ನು ಸಂಚಾರಯೋಗ್ಯವಾಗಿ ಮಾಡಬೇಕಿದೆ. ಅಶೋಕ್‌, ಕುಪ್ಪಹಳ್ಳಿ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT