ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ’: ಪ್ರಕಾಶ್ ರೈ

ಪ್ರಶಸ್ತಿ ಸ್ವೀಕರಿಸಲು ಹೊರಟ ನಟನಿಗೆ ಅದ್ಧೂರಿ ಸ್ವಾಗತ
Last Updated 10 ಅಕ್ಟೋಬರ್ 2017, 10:38 IST
ಅಕ್ಷರ ಗಾತ್ರ

ಉಡುಪಿ: ‘ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ’ ಎಂದು ಬಹು ಭಾಷಾ ನಟ ಪ್ರಕಾಶ್ ರೈ ಹೇಳಿದರು.

ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಉಡುಪಿ ಹೊರ ವಲಯದ ಸಂತೆಕಟ್ಟೆ ಬಳಿ ಪ್ರಗತಿಪರ ಸಂಘಟನೆಗಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದವು.

ಅವರನ್ನು ಉದ್ದೇಶಿಸಿ ಮಾತನಾಡಿದ ರೈ, ‘ಅಭಿಪ್ರಾಯವನ್ನು ಖಂಡಿಸಬಹುದು, ಆದರೆ ಕ್ರೌರ್ಯ ಒಳ್ಳೆಯದಲ್ಲ. ಇನ್ನೊಬ್ಬರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಯಾವ ಮನುಷ್ಯ ಪ್ರಕೃತಿ ಹಾಗೂ ಜನ ವಿರೋಧಿ ಕೆಲಸ ಮಾಡುವುದಿಲ್ಲವೋ, ಪ್ರಾಮಾಣಿಕತೆಯಿಂದ ಇರುತ್ತಾನೋ ಅಂತಹ ವ್ಯಕ್ತಿ ಯಾರಿಗೂ ಅಂಜದೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ನಾವು ನೆಮ್ಮದಿಯಿಂದ ಇರಬೇಕು’ ಎಂದರು. 

‘ಆತಂಕದ ಧ್ವನಿಗಳು ಒಂಟಿಯಲ್ಲ ಎನ್ನುವುದನ್ನು ರುಜುವಾತು ಮಾಡಿದ್ದೀರ. ನನ್ನ ವಿರುದ್ಧ ಕೆಲವರು ಧ್ವನಿ ಎತ್ತಿದಾಗ ನನ್ನನ್ನು ಒಬ್ಬಂಟಿ ಮಾಡದೆ ನನ್ನ ಪರವಾಗಿ ಮಾತನಾಡಿದ್ದೀರ. ಇದು ನನಗೆ ಧೈರ್ಯ ಕೊಟ್ಟಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT