‘ಪದ್ಮಾವತಿ’ಯಿಂದ ಮನೋವೈದ್ಯರ ತನಕ!

ಗುರುವಾರ , ಜೂನ್ 27, 2019
25 °C

‘ಪದ್ಮಾವತಿ’ಯಿಂದ ಮನೋವೈದ್ಯರ ತನಕ!

Published:
Updated:
‘ಪದ್ಮಾವತಿ’ಯಿಂದ ಮನೋವೈದ್ಯರ ತನಕ!

ಖಿನ್ನತೆ ಬಗ್ಗೆ ಮುಕ್ತವಾಗಿ ಮಾತನಾಡಿ ಪ್ರಶಂಸೆ ಗಳಿಸಿದ್ದ ನಟಿ ದೀಪಿಕಾ ಪಡುಕೋಣೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ, ಈ ಬಾರಿ ಅವರ ಜತೆಗೆ ಗೆಳೆಯ ರಣವೀರ್ ಸಿಂಗ್ ಕೂಡಾ ಇದ್ದಾರೆ.

‘ಪದ್ಮಾವತಿ’ಯಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್ ಹಾಗೂ ಪದ್ಮಾವತಿಯಾಗಿ ದೀಪಿಕಾ ಪರಕಾಯ ಪ್ರವೇಶ ಪಡೆದವರಂತೆ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಪರಕಾಯ ಪ್ರವೇಶವೇ ಅವರಿಬ್ಬರ ಮನಸ್ಥಿತಿ ಏರುಪೇರಾಗಲು ಕಾರಣವಾಗಿದೆಯಂತೆ. ಸಿನಿಮಾ ಮುಗಿದರೂ ಆ ಪಾತ್ರಗಳ ವ್ಯಕ್ತಿತ್ವವನ್ನೇ ಹೊತ್ತು ತಿರುಗುತ್ತಿದ್ದ ಅವರಿಬ್ಬರ ಮನಸಿಗೆ ಈಗ ಮನೋವೈದ್ಯರು ಚಿಕಿತ್ಸೆಯ ಮುಲಾಮು ಹಚ್ಚುತ್ತಿದ್ದಾರೆ.

‘ಪದ್ಮಾವತಿ’ಯ ಚಿತ್ರೀಕರಣ ಹೆಚ್ಚುಕಡಿಮೆ ಒಂದು ವರ್ಷ ನಡೆದಿದೆ. ಅಷ್ಟು ದೀರ್ಘಕಾಲ ಪಾತ್ರದೊಳಗೆ ತಲ್ಲೀನಗೊಂಡು ಅಭಿನಯಿಸಿದ್ದರ ಫಲವಾಗಿ ರಣವೀರ್ ಸಿಂಗ್ ಅವರು ಖಿಲ್ಜಿಯಂತೆಯೇ ಆಗಿಬಿಟ್ಟಿದ್ದರಂತೆ. ಅದನ್ನು ಮನಗಂಡ ಸ್ನೇಹಿತರು ಮನೋವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳಲು ಸಲಹೆ ನೀಡಿದರು.

ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ರಣವೀರ್ ಸಿಂಗ್ ತಮ್ಮ ಅಪಾರ್ಟ್‌ಮೆಂಟ್‌ನೊಳಗೇ ಕೆಲ ದಿನಗಳ ಕಾಲ ಬಂಧಿಯಾಗಿದ್ದರಂತೆ. ಖಿಲ್ಜಿಯ ಹುಚ್ಚಾಟ, ಯದ್ಧೋನ್ಮಾದವನ್ನು ಮೈದುಂಬಿಕೊಂಡ ರಣವೀರ್, ಚಿತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಖಿಲ್ಜಿಯ ಹರಿತವಾದ ನೋಟ ಬಿಂಬಿಸುವ ಪೋಸ್ಟರ್ ಕೂಡಾ ರಣವೀರ್ ಶ್ರಮವನ್ನು ಸಾರ್ಥಕಗೊಳಿಸುವಂತೆ ಮೂಡಿಬಂದಿತ್ತು.

ಇನ್ನು ರಾಣಿ ಪದ್ಮಾವತಿ ಪಾತ್ರದಲ್ಲಿ ಗಂಭೀರವದನೆಯಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆಗೆ, ಚಿತ್ರದ ಅಂತಿಮ ದೃಶ್ಯವಂತೂ ತುಂಬಾ ಡಿಸ್ಟರ್ಬ್ ಮಾಡಿದೆಯಂತೆ.

ಇನ್ನೇನು ಖಿಲ್ಜಿ ರಜಪೂತರ ಕೋಟೆಯನ್ನು ಆವರಿಸಿ, ಪತಿ ರಾಜಾ ರಾವಲ್ ರತನ್ ಸಿಂಗ್ ಮೇಲೆ ಯುದ್ಧ ಮಾಡಲು ಬರುತ್ತಾನೆ ಎನ್ನುವ ಆ ಸಂದರ್ಭದಲ್ಲಿ ಹೆಂಗಸರೆಲ್ಲಾ ಅಗ್ನಿಕುಂಡದೊಳಗೆ ಜಿಗಿದು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗುವ ದೃಶ್ಯ ದೀಪಿಕಾಳಿಗೆ ಮತ್ತೆ ಖಿನ್ನತೆಯ ಘಳಿಗೆಗಳನ್ನು ನೆನಪುಮಾಡಿಕೊಟ್ಟಿತಂತೆ. ಮತ್ತೊಮ್ಮೆ ಅಂಥ ಖಿನ್ನತೆಗೆ ಜಾರದಿರಲು ದೀಪಿಕಾ ಮನೋವೈದ್ಯರ ಸಲಹೆ ಪಡೆಯುತ್ತಿದ್ದಾರಂತೆ.

ಅಂದಹಾಗೆ ‘ಪದ್ಮಾವತಿ’ ಇದೇ ಡಿ.1ರಂದು ತೆರೆ ಕಾಣಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry