ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಯತ್ತ ಕೆಸ್ತೂರು

Last Updated 11 ಅಕ್ಟೋಬರ್ 2017, 5:54 IST
ಅಕ್ಷರ ಗಾತ್ರ

ಯಳಂದೂರು: ಕಳೆದ ಮೂರು ದಿನಗಳಿಂದ ಮಳೆ ಹಾಗೂ ನೀರಿನ ಪ್ರವಾಹಕ್ಕೆ ತುತ್ತಾಗಿದ್ದ ಕೆಸ್ತೂರು ಗ್ರಾಮ ಮಂಗಳವಾರ ಸಹಜ ಸ್ಥಿತಿಗೆ ತಲುಪಿತು. ಗ್ರಾಮದ ತಗ್ಗು ಪ್ರದೇಶಗಳ ಮನೆಗಳಿಗೆ 3 ದಿನಗಳಿಂದ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇದಕ್ಕೆ ಮುಖ್ಯ ಕಾಲುವೆಯಲ್ಲಿ ಹೂಳು ತುಂಬಿದ್ದೇ ಪ್ರಮುಖ ಕಾರಣವಾಗಿತ್ತು.

ಮಂಗಳವಾರ ನೀರಿನ ಹರಿವಿನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಸಂತ್ರಸ್ಥರು ಮನೆಗಳನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತರಾದರು. ಅಧಿಕಾರಿಗಳು ಸ್ಥಳದಲ್ಲಿದ್ದು ನೆರವಾಗಲು ಶಾಸಕ ಎಸ್‌. ಜಯಣ್ಣ ಮಾರ್ಗದರ್ಶನ ಮಾಡಿದರು.

ಮಂಗಳವಾರ 5 ಕುಟುಂಬಗಳ ಸದಸ್ಯರಿಗೆ ಬಿಸಿಎಂ ಹಾಸ್ಟೆಲ್‌ ನಲ್ಲಿ ಊಟದ ಸೌಲಭ್ಯವನ್ನು ಮಾಡಲಾಗಿದೆ. ಪರಿಸ್ಥಿತಿಯನ್ನು ನೋಡಿ ಸೌಲಭ್ಯ ಮುಂದುವರೆಸಲು ಕ್ರಮ ವಹಿಸಲಾಗುವುದು ಎಂದು ಉಪ ತಹಶೀಲ್ದಾರ್ ವೈ.ಎಂ. ನಂಜಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT