ಸಚಿವ ಆರ್.ಬಿ.ತಿಮ್ಮಾಪುರಗೆ ಮಾತೃ ವಿಯೋಗ

ಶುಕ್ರವಾರ, ಮೇ 24, 2019
28 °C

ಸಚಿವ ಆರ್.ಬಿ.ತಿಮ್ಮಾಪುರಗೆ ಮಾತೃ ವಿಯೋಗ

Published:
Updated:
ಸಚಿವ ಆರ್.ಬಿ.ತಿಮ್ಮಾಪುರಗೆ ಮಾತೃ ವಿಯೋಗ

ಮುಧೋಳ (ಬಾಗಲಕೋಟೆ ಜಿಲ್ಲೆ): ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ತಾಯಿ ಸತ್ಯವ್ವ ಬಾಲಪ್ಪ ತಿಮ್ಮಾಪುರ (77) ಮಂಗಳವಾರ ರಾತ್ರಿ ನಿಧನರಾದರು.

ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸತ್ಯವ್ವ, ಪತಿ ಬಾಲಪ್ಪ ಅವರೊಂದಿಗೆ ಉತ್ತೂರಿನಲ್ಲಿ ವಾಸವಿದ್ದರು. ರಾತ್ರಿ ಊಟ ಮಾಡಿದ ನಂತರ ದಿಢೀರ್ ಅಸ್ವಸ್ಥರಾಗಿದ್ದ ಅವರನ್ನು ಮುಧೋಳದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದ ತಿಮ್ಮಾಪುರ, ತಾಯಿಯ ಸಾವಿನ ಸುದ್ದಿ ತಿಳಿದು ರಾಣೆಬೆನ್ನೂರಿನಿಂದ ವಾಪಸ್‌ ಬಂದರು.

ಮೃತರಿಗೆ ಪತಿ, ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಬುಧವಾರ ಉತ್ತೂರ ಗ್ರಾಮದ ತೋಟದಲ್ಲಿ ಹಿರಿಯ ಪುತ್ರರಾದ ಆರ್.ಬಿ.ತಿಮ್ಮಾಪುರ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry