ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಡ್‌ಬಾಲ್‌: ಕರ್ನಾಟಕಕ್ಕೆ ಮತ್ತೊಂದು ಜಯ

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಆರಂಭದಿಂದಲೂ ವೇಗವಾಗಿ ಗೋಲು ಕಲೆಹಾಕಿದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ 40ನೇ ರಾಷ್ಟ್ರೀಯ ಬಾಲಕಿಯರ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿದೆ.

ಭಾರತಹ್ಯಾಂಡ್‌ಬಾಲ್‌  ಫೆಡರೇಷನ್‌, ರಾಜ್ಯ ಹ್ಯಾಂಡ್‌ಬಾಲ್‌ ಸಂಸ್ಥೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ಟೂರ್ನಿ ನಡೆಯುತ್ತಿದೆ.

ಬುಧವಾರ ನಡೆದ ಪಂದ್ಯದಲ್ಲಿ ರಾಜ್ಯ ತಂಡ 21–4 ಗೋಲುಗಳಿಂದ ಪಶ್ಚಿಮ ಬಂಗಾಳ ಎದುರು ಗೆದ್ದಿತು. ಮೊದಲ ದಿನ ಆಂಧ್ರ ತಂಡವನ್ನು ಮಣಿಸಿತ್ತು.

ದಿನದ ಇನ್ನಷ್ಟು ಲೀಗ್ ಪಂದ್ಯಗಳಲ್ಲಿ ತೆಲಂಗಾಣ 14–7ರಲ್ಲಿ ಆಂಧ್ರದ ಮೇಲೂ, ಬಿಹಾರ 21–1ರಲ್ಲಿ ಒಡಿಶಾ ವಿರುದ್ಧವೂ, ಪಂಜಾಬ್‌ 33–9ರಲ್ಲಿ ಗೋವಾ ಮೇಲೂ, ಉತ್ತರ ಪ್ರದೇಶ 24–5ರಲ್ಲಿ ಒಡಿಶಾ ಮೇಲೂ, ಭಾರತ ಕ್ರೀಡಾ ಪ್ರಾಧಿಕಾರ 50–9ರಲ್ಲಿ ತ್ರಿಪುರ ವಿರುದ್ಧವೂ, ಮಧ್ಯಪ್ರದೇಶ 21–10ರಲ್ಲಿ ಮುಂಬೈ ಹ್ಯಾಂಡ್‌ಬಾಲ್‌ ಅಕಾಡೆಮಿ ವಿರುದ್ಧವೂ, ದೆಹಲಿ 19–3ರಲ್ಲಿ ಛತ್ತೀಸಗಡ ವಿರುದ್ಧವೂ, ಕೇರಳ 24–20ರಲ್ಲಿ ಚಂಡೀಗಡ ಮೇಲೂ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT