ಸೋಮವಾರ, ಸೆಪ್ಟೆಂಬರ್ 16, 2019
21 °C

ಮೆಸ್ಸಿ ಹ್ಯಾಟ್ರಿಕ್‌ ಮೋಡಿ

Published:
Updated:
ಮೆಸ್ಸಿ ಹ್ಯಾಟ್ರಿಕ್‌ ಮೋಡಿ

ಮಾಂಟೆವಿಡಿಯೊ: ಲಯೊನೆಲ್‌ ಮೆಸ್ಸಿ ಅವರ ‘ಹ್ಯಾಟ್ರಿಕ್‌’ ಗೋಲಿನ ಸಾಧನೆಯ ಬಲದಿಂದ ಅರ್ಜೆಂಟೀನಾ ತಂಡ ಮುಂದಿನ ವರ್ಷ ರಷ್ಯಾದಲ್ಲಿ ನಡೆಯುವ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 3–1 ಗೋಲುಗಳಿಂದ ಈಕ್ವೆಡರ್‌ ತಂಡವನ್ನು ಪರಾಭವಗೊಳಿಸಿತು. ಈಕ್ವೆಡರ್‌ ತಂಡದ ರೊಮೆರಿಯೊ ಇಬ್ರಾರ್‌ ಆರಂಭದಲ್ಲೇ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು.

ಆ ನಂತರ ಮೆಸ್ಸಿ ಮೋಡಿ ಮಾಡಿದರು. ಆರಂಭದ 20 ನಿಮಿಷಗಳಲ್ಲಿ ಎರಡು ಗೋಲು ದಾಖಲಿಸಿದ ಅವರು 44ನೇ ನಿಮಿಷದಲ್ಲೂ ಚೆಂಡನ್ನು ಗುರಿ ಮುಟ್ಟಿಸಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು.

ಎರಡು ಬಾರಿಯ ಕೊಪಾ ಅಮೆರಿಕಾ ಚಾಂಪಿಯನ್‌ ಚಿಲಿ ತಂಡ 0–3 ಗೋಲುಗಳಿಂದ ಬ್ರೆಜಿಲ್‌ ವಿರುದ್ಧ ಸೋತು ವಿಶ್ವಕಪ್‌ ಅರ್ಹತೆ ಕಳೆದುಕೊಂಡಿತು.

ಅಮೆರಿಕ ಕೂಡ ಕೂಟಕ್ಕೆ ಅರ್ಹತೆ ಗಳಿಸಲು ವಿಫಲವಾಯಿತು. ಪೋರ್ಚುಗಲ್‌ ತಂಡ ಕೂಡ ಅರ್ಹತೆ ತನ್ನದಾಗಿಸಿಕೊಂಡಿತು.

Post Comments (+)