‘ನಾಗರಿಕತೆ ನಿರ್ಮಾಣ; ವಿಶ್ವಕರ್ಮರ ಪಾತ್ರ ಹಿರಿದು’

ಮಂಗಳವಾರ, ಜೂನ್ 18, 2019
24 °C

‘ನಾಗರಿಕತೆ ನಿರ್ಮಾಣ; ವಿಶ್ವಕರ್ಮರ ಪಾತ್ರ ಹಿರಿದು’

Published:
Updated:

ಧಾರವಾಡ: ‘ಭಾರತೀಯ ನಾಗರಿಕತೆ ನಿರ್ಮಾಣದಲ್ಲಿ ಕುಶಲಕರ್ಮಿಗಳ ಪಾತ್ರ ಹಿರಿದು. ಋಗ್ವೇದ ಕಾಲದಿಂದಲೂ ವಿಶ್ವಕರ್ಮ ಜನಾಂಗ ನಯ ಹಾಗೂ ನಾಜೂಕಾದ ಕಲೆ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಮಾನವ ಧರ್ಮ ಪ್ರತಿಷ್ಠಾನ ದತ್ತಿ ಕಾರ್ಯಕ್ರಮದಲ್ಲಿ ‘ಶಂಭಾ ಜೋಶಿ ಅವರ ವಿಶ್ವಕರ್ಮ ಚಿಂತನೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ನಗರ ನಿರ್ಮಾಣ ವಿನ್ಯಾಸದಲ್ಲಿ ವಿಶ್ವಕರ್ಮರ ಪಾತ್ರ ಅನನ್ಯವಾದುದು. ಇತ್ತೀಚೆಗೆ ಕುಶಲಕರ್ಮಿಗಳನ್ನು ನಿರ್ಲಕ್ಷಿಸುವ ಮನೋಧರ್ಮ ಹೆಚ್ಚುತ್ತಿದೆ. ಕುಶಲಮತಿ ಮತ್ತು ಜಾಣ್ಮೆಯನ್ನು ಗುರುತಿಸಿ ಗೌರವಿಸಬೇಕಾದದ್ದು ಪ್ರತಿಯೊಬ್ಬರ ಹೊಣೆಗಾರಿಕೆ’ ಎಂದರು.

‘ಜಾನಪದ ಸಾಹಿತ್ಯದಲ್ಲಿ ಅವ್ವ’ ವಿಷಯ ಕುರಿತು ಮಾತನಾಡಿದ ಡಾ.ಚಂದ್ರಶೇಖರ ವಸ್ತ್ರದ, ‘ಅವ್ವ ಎನ್ನುವುದು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟವಾದ ಸಂಗತಿ. ಅವ್ವನಿಗೆ ಅವ್ವನೇ ಸಾಟಿ. ಅದಕ್ಕೆ ಪರ್ಯಾಯವಿಲ್ಲ. ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ. ಆದರೆ, ಅವ್ವ ಸಿಗುವುದು ಸಾಧ್ಯವಿಲ್ಲ. ಗ್ರಾಮೀಣ ಸೊಗಡಿನಲ್ಲಿ ಅವ್ವ ಭೂ ತಾಯಿಯ ಸಮಾನಳು. ಅವ್ವನ ಮಹತ್ವ ಜಾನಪದ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿದೆ’ ಎಂದರು.

ಡಾ. ಶ್ಯಾಮಸುಂದರ ಬಿದರಕುಂದಿ, ಮಹಾದೇವಪ್ಪ ಸಿದ್ನಾಳ, ವಿ.ಜಿ ಭಟ್, ಭೀಮಸೇನ ಬಡಿಗೇರ, ಡಾ.ವಿ.ಸಿ ಐರಸಂಗ, ಮಲ್ಲಮ್ಮ ಕಣವಿ, ಪಿ.ಎಸ್‌. ನೀರಲಕೇರಿ, ಎಸ್.ಎಸ್.ದೊಡಮನಿ, ಜಿ.ಟಿ.ದೊಡಮನಿ, ಎಫ್.ಬಿ.ಕಣವಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry