ಸರಿಯಾದ ನಿರ್ಧಾರ

ಸೋಮವಾರ, ಮೇ 27, 2019
23 °C

ಸರಿಯಾದ ನಿರ್ಧಾರ

Published:
Updated:

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸಿಬಿಎಸ್‌ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ ಅಡಿ ಇಲ್ಲಿಯವರೆಗೆ ಜಾರಿಯಲ್ಲಿದ್ದ ವಿದೇಶಿ ಭಾಷೆ ಕಲಿಸುವುದಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವುದು ವಿವೇಕಯುತ ನಿರ್ಧಾರವಾಗಿದೆ.

ಈ ಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ತ್ರಿಭಾಷಾ ಸೂತ್ರದ ಅಡಿಯಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಉಲ್ಲೇಖಿತ ಭಾಷೆಗಳನ್ನು ಮಾತ್ರ ಕಲಿಸಬೇಕಾಗುತ್ತದೆ. ಇದರಿಂದ ಸ್ಥಳೀಯ ಭಾಷೆಗಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದಿ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯಾಗಿ ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಯುವುದು ಕಡ್ಡಾಯ ಮಾಡಿದರೆ ದಕ್ಷಿಣ ರಾಜ್ಯಗಳಲ್ಲಿರುವ ಹಿಂದಿ ವಿರೋಧಿ ಕಾವು ತುಸುವಾದರೂ ತಣ್ಣಗಾಗಬಹುದು. ಇದು ಒಟ್ಟಾರೆ ಸ್ಥಳೀಯ ಭಾಷೆಗಳ ಹಿತರಕ್ಷಣೆ, ಅಭ್ಯುದಯಕ್ಕೆ ಕಾರಣವಾಗುತ್ತದೆ.

ನಮ್ಮ ದೇಶದ ಮಕ್ಕಳು ತಮ್ಮ ನೆಲದ್ದಲ್ಲದ ಭಾಷೆ ಕಲಿಯುವುದರಿಂದ ಅವರು ಸ್ಥಳೀಯ ಸಂಸ್ಕೃತಿಯ ತಿಳಿವಳಿಕೆಯಿಂದ ವಂಚಿತರಾಗಬೇಕಾಗುತ್ತದೆ. ನಮ್ಮ ಭಾಷೆಗಳನ್ನು ನಾವೇ ಕಲಿತು ಉಳಿಸಿ-ಬೆಳೆಸಬೇಕು. ಈ ಕೆಲಸವನ್ನು ವಿದೇಶಿಯರು ಮಾಡಲಾರರು. ಸ್ಥಳೀಯ ಭಾಷೆಗಳಿಗೆ ಪ್ರೋತ್ಸಾಹ ಮತ್ತು ಪ್ರಾಮುಖ್ಯ ನೀಡುವ ದಿಶೆಯಲ್ಲಿ ಭಾರತೀಯ ಭಾಷೆಗಳ ಮೇಲೆ ಆಲದ ಮರದಂತೆ ವ್ಯಾಪಿಸಿರುವ, ಗುಲಾಮಿ ಸಂಸ್ಕೃತಿಯ ಪ್ರತೀಕವಾಗಿರುವ ಇಂಗ್ಲಿಷ್‌ ಅನ್ನು ಕೈಬಿಟ್ಟು ಸಂಪೂರ್ಣ ಸ್ವದೇಶಿ ಭಾಷೆಗಳಿಂದ ಕೂಡಿದ ಭಾಷಾಸೂತ್ರವೊಂದನ್ನು

ಜಾರಿ ಮಾಡಬೇಕು. ಆ ಮೂಲಕ ಜಪಾನ್‌, ಚೀನಾದಂತಹ ದೇಶಗಳಲ್ಲಿರುವ ಭಾಷಾ ವಿವೇಕವನ್ನು ನಾವೂ ತೋರಿಸಬೇಕು.

-ಹಜರತಅಲಿ ಇ. ದೇಗಿನಾಳ, ವಿಜಯಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry