ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಗೇರಾ: ಮೈಲಾರಲಿಂಗೇಶ್ವರ ಜಾತ್ರೆ ಇಂದಿನಿಂದ

Last Updated 13 ಅಕ್ಟೋಬರ್ 2017, 10:11 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಹಳಿಗೇರಾ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಅ.13ರಿಂದ ಆರಂಭಗೊಳ್ಳಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಅ.13ರ ರಾತ್ರಿ 10ಕ್ಕೆ ಹಳಿಗೇರಾ ಹಾಗೂ ಹೊಸಳ್ಳಿ ಗ್ರಾಮದ ಭಕ್ತರು ಮೈಲಾಪುರದ ಮೈಲಾರಲಿಂಗೇಶ್ವರ ಮೂರ್ತಿಯನ್ನು ತರಲು ತೆರಳುವರು.

ಅ.14ರಂದು ಗ್ರಾಮದ ಚಂದ್ರಕಟ್ಟೆ ಮೇಲೆ ನಿಂತು ಭಕ್ತರಿಂದ ಕಾಯಿ ಕರ್ಪೂರ ದೀಡ್ ನಮಸ್ಕಾರ ನಡೆಯುವುದು. ಮಧ್ಯಾಹ್ನ 1ಕ್ಕೆ ಮೈಲಾರಲಿಂಗೇಶ್ವರ ಹಳಿಗೇರಾ ದೇವಸ್ಥಾನಕ್ಕೆ ಮೆರವಣಿಗೆ ತಲುಪಲಿದೆ. ನಂತರ ಗುಂಡು ಎತ್ತುವ, ಕೈಕುಸ್ತಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಅ.15ರಂದು ಕಬಡ್ಡಿ ಪಂದ್ಯಾವಳಿ ಜರುಗುವುದು.

ಅ.16ರ ಸಂಜೆ 6ರಿಂದ ವಿವಿಧ ಧಾರ್ಮಿಕ ಕಾರ್ಯ, ಡೊಳ್ಳಿನ ಪದ ಹಾಗೂ ಭಜನೆ ನಡೆಯುವುದು. ಅ.17ರ ಸಂಜೆ 4ಕ್ಕೆ ಡೋಣಿ ತುಂಬುವ ಕಾರ್ಯಕ್ರಮ ನಡೆಯುವುದು. ನಂತರ ಬಡಿಗೇರ ಮನೆಯಲ್ಲಿ ಎಲೆತಟ್ಟಿ ಪೂಜಾ ನಡೆಯಲಿದೆ.

ಸಂಜೆ 6ಕ್ಕೆ ದೇವಸ್ಥಾನಕ್ಕೆ ಮೆರವಣಿಗೆ ಮರಳಿ ಬರಲಿದೆ. ಜ್ಯೋತಿ ಕಾರ್ಯಕ್ರಮ ನೆರವೇರಿಸಿದ ನಂತರ ಹಳಿಗೇರಾ ಗ್ರಾಮದಿಂದ ಮೈಲಾಪುರ ಗ್ರಾಮಕ್ಕೆ ಮೈಲಾರಲಿಂಗೇಶ್ವರ ದೇವರ ಮೂರ್ತಿ ಬೀಳ್ಕೊಡಲಾಗುವುದು ಎಂದು ಹಳಿಗೇರಾ ದೇವಸ್ಥಾನದ ಪೂಜಾರಿ ಶಂಕರಪ್ಪ ಪೂಜಾರಿ ತಿಳಿಸಿದ್ದಾರೆ. ‌‌ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮಾಹಿತಿಗೆ ಮೊಬೈಲ್‌ ದೂರವಾಣಿ ಸಂಖ್ಯೆ 9880 04031 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT