ಮೋದಿ ಗಾರ್ಡನ್‌ಗೆ ಮಿಡಿ ಬಸ್‌

ಬುಧವಾರ, ಜೂನ್ 26, 2019
29 °C

ಮೋದಿ ಗಾರ್ಡನ್‌ಗೆ ಮಿಡಿ ಬಸ್‌

Published:
Updated:

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಮೋದಿನಗರದ ಮೋದಿ ಗಾರ್ಡನ್‌ಗೆ ಆರಂಭಿಸಿರುವ ಬಿಎಂಟಿಸಿ ನೂತನ ಬಸ್ ಸಂಚಾರ ಸೇವೆಗೆ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್‌ ಭಾನುವಾರ ಚಾಲನೆ ನೀಡಿದರು.

ಈ ಮಾರ್ಗದಲ್ಲಿ ಮಿಡಿಬಸ್ ಪ್ರತಿದಿನ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12 ರ ವರೆಗೆ 4 ಟ್ರಿಪ್ ಹಾಗೂ ಸಂಜೆ 4 ರಿಂದ 10ರ ವರೆಗೆ 4 ಟ್ರಿಪ್‌ಗಳು ಸಂಚಾರ ನಡೆಸಲಿದೆ. ಬಸ್‌ನಲ್ಲಿ ಒಟ್ಟು 31 ಸೀಟುಗಳಿವೆ.

ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯರಿಗೆ ಅನುಕೂಲವಾಗಲಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಬಸ್‌ಗಳನ್ನು ಓಡಿಸಲು ಪರಿಶೀಲಿಸುತ್ತೇವೆ ಎಂದು ನಾಗರಾಜ್ ಯಾದವ್‌ ತಿಳಿಸಿದರು.

ಬಳಿಕ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry