ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ನೆಲಕಚ್ಚಿದ 41 ಮನೆಗಳು

Last Updated 16 ಅಕ್ಟೋಬರ್ 2017, 9:30 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಮಳೆಗೆ ಭಾಗಶಃ 41 ಮನೆಗಳು ಬಿದ್ದಿವೆ. ಹಲವೆಡೆ ಶೇಂಗಾ, ತೊಗರಿ ಬೆಳೆಗೆ ಹಾನಿಯಾಗಿದೆ. ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮದ ಸಣ್ಣಪ್ಪ ಎಂಬುವರು ಕಟಾವು ಮಾಡಿದ ಶೇಂಗಾ ಬಳ್ಳಿ ಕೊಚ್ಚಿ ಹೋಗಿ ಹಳ್ಳದ ಮೂಲಕ ಕೆರೆ ಸೇರಿದೆ.

ಹಳ್ಳದ ಗಿಡ ಪೊದೆಗಳಲ್ಲಿ ಸಿಕ್ಕಿಕೊಂಡಿದ್ದ ಬಳ್ಳಿಯನ್ನು ಕುಟುಂಬ ಸದಸ್ಯರು ಸಂಗ್ರಹಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. 3 ಎಕರೆ ಪ್ರದೇಶದಲ್ಲಿ ಶೇಂಗಾ, ತೊಗರಿ ಬೆಳೆದಿದ್ದೆ. ಕಟಾವು ಮಾಡಿ ಜಮೀನಿನಲ್ಲಿಯೇ ಬಿಡಲಾಗಿತ್ತು. 

ಮಳೆಯಿಂದಾಗಿ 1 ಬಂಡಿಯಷ್ಟು ಶೇಂಗಾ ಬಳ್ಳಿ ಕೊಚ್ಚಿ ಹೋಗಿದೆ. ತೊಗರಿ ಬಾಗಿದೆ. ಇದರಿಂದ ₹ 30 ಸಾವಿರ ನಷ್ಟವಾಗಿದೆ ಎಂದು ರೈತ ಸಣ್ಣಪ್ಪ ಅಳಲನ್ನು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT