ಶನಿವಾರ, ಸೆಪ್ಟೆಂಬರ್ 21, 2019
21 °C
ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಆಗ್ರಹ

ಸಿಬ್ಬಂದಿಯ ಮೂಲ ವೇತನ ಹೆಚ್ಚಿಸಿ

Published:
Updated:

ಬೆಂಗಳೂರು: ‘ಕೈಗಾರಿಕಾ ವಿವಾದ ಔದ್ಯಮಿಕ ನ್ಯಾಯಾಧೀಕರಣವು 2017ರ ಆಗಸ್ಟ್‌ 29ರಂದು ನೀಡಿದ ತೀರ್ಪನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್‌ಟಿಸಿ) ಕೂಡಲೇ ಜಾರಿಗೊಳಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಎಸ್‌.ನಾಗರಾಜು ಒತ್ತಾಯಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಗಮದ ಕಾರ್ಮಿಕರ ಮೂಲ ವೇತನವನ್ನು ಶೇ 20ರಷ್ಟು ಹೆಚ್ಚಿಸಬೇಕು. ಹಬ್ಬದ ಮುಂಗಡವಾಗಿ ಪ್ರತಿವರ್ಷ ₹ 5,000 ನೀಡಬೇಕು. ನೌಕರರಿಗೆ ಸಮವಸ್ತ್ರ ಹೊಲಿಸಿಕೊಳ್ಳಲು ವಾರ್ಷಿಕ ₹ 250 ನೀಡಬೇಕು. ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಮಗ್ರ ಯೋಜನೆ ರೂಪಿಸಬೇಕು’ ಎಂದರು.

‘ಸರ್ಕಾರಿ ನೌಕರರಿಗೆ ಇರುವ ಎಲ್ಲ ಪಿಂಚಣಿ ಸೌಲಭ್ಯಗಳನ್ನು ನಿಗಮದ ಕಾರ್ಮಿಕರಿಗೂ ಒದಗಿಸಬೇಕು. ಪ್ರತಿ ಬಸ್‌ ಡಿಪೊದಲ್ಲಿ ಕ್ಯಾಂಟೀನ್‌ ಆರಂಭಿಸಬೇಕು. ಅಪಘಾತ ಪರಿಹಾರ, ವಿದ್ಯಾನಿಧಿ, ಚಾಲಕರ ರಕ್ಷಣೆಗೆ ಸಹಾಯಧನ ನೀಡಬೇಕು’ ಎಂದು ಆಗ್ರಹಿಸಿದರು.

Post Comments (+)