ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌, ಫೇಸ್‌ಬುಕ್‌ ಬಳಸಿ ‘ಇ–ದೂರು’ ನೀಡಿ

ಅಭಿವೃದ್ಧಿ ಸಚಿವರಿಗೆ ಬರುವ ದೂರು ನಿರ್ವಹಣೆಗೆ ಸಾಮಾಜಿಕ ಮಾಧ್ಯಮ ಕೇಂದ್ರ
Last Updated 16 ಅಕ್ಟೋಬರ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅಥವಾ ವಾರ್ಡ್‌ ಅಭಿವೃದ್ಧಿಗೆ ಸಂಬಂಧಿಸಿದ ಅಹವಾಲುಗಳಿವೆಯೇ. ಈ ಬಗ್ಗೆ ನೀವು ನೇರವಾಗಿ ಬೆಂಗಳೂರು ಅಭಿವೃದ್ಧಿ ಸಚಿವರ ಫೇಸ್‌ಬುಕ್‌ ಅಥವಾ ಟ್ವಿಟರ್‌ ಖಾತೆ ಮೂಲಕವೂ ಹಂಚಿಕೊಳ್ಳಬಹುದು.

ಸಚಿವರಿಗೆ ಬರುವ ‘ಇ–ದೂರು’ಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವ ಸಲುವಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಕೇಂದ್ರ ಕಚೇರಿಯ ಕಟ್ಟಡದಲ್ಲಿ ಪ್ರತ್ಯೇಕ ಆನ್‌ಲೈನ್‌ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಚಿವ ಕೆ.ಜೆ.ಜಾರ್ಜ್‌ ಅವರು ಸೋಮವಾರ ಈ ಕೇಂದ್ರವನ್ನು ಉದ್ಘಾಟಿಸಿದರು.

‘ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಜಲಮಂಡಳಿ, ಬೆಂಗಳೂರು ಮೆಟ್ರೊ ರೈಲು ನಿಗಮಗಳಿಗೆ (ಬಿಎಂಆರ್‌ಸಿಎಲ್) ಸಂಬಂಧಿಸಿದ ಸಮಸ್ಯೆಗಳನ್ನು ಹಾಗೂ ದೂರುಗಳನ್ನು ಸಾರ್ವಜನಿಕರು ಫೇಸ್‌ಬುಕ್‌ ಖಾತೆ ( https://www.facebook.com/blrdevminister) ಅಥವಾ ಟ್ವಿಟರ್‌ (https://twitter.com/blrdevminister) ಖಾತೆ ಮೂಲಕವೂ ಸಲ್ಲಿಸಬಹುದು’ ಎಂದು ಸಚಿವರು ತಿಳಿಸಿದರು.

‘ಇ ದೂರುಗಳನ್ನು ದಾಖಲಿಸಿಕೊಳ್ಳುವ ಕೇಂದ್ರದ ಸಿಬ್ಬಂದಿ ತಕ್ಷಣ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಇ–ದೂರುಗಳನ್ನು ನಿರ್ವಹಿಸುವುದಕ್ಕಾಗಿಯೇ ಆಯಾ ಸಂಸ್ಥೆಯಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುತ್ತಾರೆ. ದೂರು ಬಂದ 48 ಗಂಟೆಗಳ ಒಳಗೆ ಸಮಸ್ಯೆ ಬಗೆಹರಿಸಿ, ಈ ಬಗ್ಗೆ ದೂರು ನೀಡಿದವರಿಗೆ ತಿಳಿಸುತ್ತೇವೆ. ಸಮಸ್ಯೆ ಬಗೆಹರಿಸಲು ಹೆಚ್ಚು ಕಾಲಾವಕಾಶ ಬೇಕಾದಲ್ಲಿ ದೂರು ನೀಡಿದವರ ಗಮನಕ್ಕೆ ತರುತ್ತೇವೆ’ ಎಂದು ಸಚಿವರು ವಿವರಿಸಿದರು.

‘ ಒಂದು ವರ್ಷದಿಂದ ಆನ್‌ಲೈನ್ ದೂರುಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ, ಈ ವ್ಯವಸ್ಥೆಯ ನಿರ್ವಹಣೆಗಾಗಿ ಈಗ ಪ್ರತ್ಯೇಕ ಕೇಂದ್ರವನ್ನು ಆರಂಭಿಸಲಾಗಿದೆ. ಇದುವರೆಗೆ 3,500ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದೇವೆ. ಈ ಪೈಕಿ 2,500 ದೂರು ಬಿಬಿಎಂಪಿಗೆ ಸಂಬಂಧಿಸಿದವು.ಇವುಗಳಲ್ಲಿ ಶೇ 60ರಷ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಎಲ್ಲಿಯಾದರೂ ಕಸ ವಿಲೇವಾರಿ ಆಗದ ಬಗ್ಗೆ ದೂರು ಬಂದರೆ, ಅದೇ ದಿನ ಅದನ್ನು ತೆರವು ಮಾಡಬಹುದು. ಮೋರಿ ನಿರ್ಮಿಸುವ ಅಗತ್ಯ ಇದೆ ಎಂಬ ಬಗ್ಗೆ ಬೇಡಿಕೆ ಬಂದರೆ, ಅದನ್ನು ಈಡೇರಿಸಲು ಹೆಚ್ಚು ಸಮಯ ಬೇಕು. ಬಿಬಿಎಂಪಿಗೆ ಒಂದು ವರ್ಷದಲ್ಲಿ 1.68 ಲಕ್ಷ ದೂರುಗಳು ಬಂದಿದ್ದವು. ಈ ಪೈಕಿ ಶೇ 96ರಷ್ಟನ್ನು ವಿಲೇವಾರಿ ಮಾಡಿದ್ದೇವೆ. ಅಹವಾಲುಗಳ ಪರಿಶೀಲನೆ ನಡೆಸಲು ಉಪವಿಭಾಗ, ವಿಭಾಗ ಹಾಗೂ ವಲಯ ಮಟ್ಟದಲ್ಲಿ ಪ್ರತಿ ತಿಂಗಳು ಸಭೆಗಳನ್ನು ನಡೆಸಲಾಗುತ್ತಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

***
‘ನೇರವಾಗಿಯೂ ದೂರು ನೀಡಬಹುದು’

ಸಾರ್ವಜನಿಕರು ಬಿಬಿಎಂಪಿ, ಬಿಡಿಎ, ಜಲಮಂಡಳಿ ಅಥವಾ ಬಿಎಂಆರ್‌ಸಿಎಲ್‌ಗೆ ಟ್ವಿಟರ್‌ ಅಥವಾ ಫೇಸ್‌ಬುಕ್‌ ಮೂಲಕ ನೇರವಾಗಿಯೂ ನೇರವಾಗಿಯೂ ದೂರು ನೀಡಬಹುದು.

ಬಿಬಿಎಂಪಿ: https://www.facebook.com/bbmp.comm) ಅಥವಾ   (https://twitter.com/BBMPCOMM1)

ಬಿಡಿಎ: https://www.facebook.com/pq/BDABLR/) ಅಥವಾ  (https://twitter.com/bdablr)

ಜಲಮಂಡಳಿ: https://www.facebook.com/bangalorewatersupply) ಅಥವಾ   (https://twitter.com/chairmanbwssb)

ನಮ್ಮಮೆಟ್ರೊ: https://www.facebook.com/cpronammametro) ಅಥವಾ ಟ್ವಿಟರ್‌ (https://twitter.com/BMRCL

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT