ಮಾರುಕಟ್ಟೆಗೆ ತೊಗರಿಕಾಯಿ ಲಗ್ಗೆ

ಶನಿವಾರ, ಮೇ 25, 2019
27 °C

ಮಾರುಕಟ್ಟೆಗೆ ತೊಗರಿಕಾಯಿ ಲಗ್ಗೆ

Published:
Updated:
ಮಾರುಕಟ್ಟೆಗೆ ತೊಗರಿಕಾಯಿ ಲಗ್ಗೆ

ಚಾಮರಾಜನಗರ: ಮಾರುಕಟ್ಟೆಯಲ್ಲಿ ಈಗ ತೊಗರಿಕಾಯಿಯ ಕಾರುಬಾರು. ಜಿಲ್ಲಾ ಕೇಂದ್ರದ ಮಾರುಕಟ್ಟೆಯಲ್ಲಿ ತೊಗರಿಕಾಯಿಯ ರಾಶಿಯೇ ಕಂಡುಬರು ತ್ತಿದೆ. ಬಗೆಬಗೆಯ ತರಕಾರಿಗಳನ್ನು ತರುತ್ತಿದ್ದ ಕೆಲವು ವ್ಯಾಪಾರಿಗಳು, ಈಗ ಕೈಗಾಡಿಗಳಲ್ಲಿ ತೊಗರಿಕಾಯಿಯನ್ನೇ ತುಂಬಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿಕಾಯಿ ಬೆಳೆಯಲಾಗಿದ್ದು, ಮಾರುಕಟ್ಟೆಗೆ ಯಥೇಚ್ಛವಾಗಿ ಪೂರೈಕೆಯಾಗುತ್ತಿದೆ.

ತೊಗರಿಕಾಯಿಗೆ ಪ್ರತಿ ಕೆ.ಜಿಗೆ ₹ 35 ರಿಂದ 40 ಧಾರಣೆಯಿದೆ. ಅವಧಿಯ ಆರಂಭವಾಗಿರುವುದರಿಂದ ಗ್ರಾಹಕರೂ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಿಂದ ಇತರೆ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ದೀಪಾವಳಿ ಸಮೀಪಿಸುತ್ತಿರುವುದರಿಂದ ಮಾರುಕಟ್ಟೆ ಯಲ್ಲಿ ತರಕಾರಿ ಧಾರಣೆ ಏರುವುದು ಸಹಜ. ಆದರೆ, ಸದ್ಯ ಅಷ್ಟೇನೂ ಬದಲಾವಣೆಯಾಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಟೊಮೆಟೊ ಬೆಲೆ ಕುಸಿತ: ಮಾರುಕಟ್ಟೆಯಲ್ಲಿ ಮತ್ತೆ ಟೊಮೆಟೊ ಬೆಲೆ ಕುಸಿತವಾಗಿದೆ. ಹಿಂದಿನವಾರ ಕೆಜಿಗೆ ₹ 20 ರಿಂದ 30ಕ್ಕೆ ಮಾರಾಟವಾಗುತ್ತಿದ್ದ ಟೊಮೊಟೊ ಪ್ರಸ್ತುತ ₹ 10ಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

ಟೊಮೆಟೊ ಬೆಲೆ ಕುಸಿತ: ಮಾರುಕಟ್ಟೆಯಲ್ಲಿ ಮತ್ತೆ ಟೊಮೆಟೊ ಬೆಲೆ ಕುಸಿತವಾಗಿದೆ. ಹಿಂದಿನವಾರ ಕೆಜಿಗೆ ₹ 20 ರಿಂದ 30ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಪ್ರಸ್ತುತ ₹ 10ಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

‘ನೆರೆಯ ತಮಿಳುನಾಡಿನಲ್ಲೂ ಈಗ ಬೆಳೆ ಉತ್ತಮವಾಗಿ ಬಂದಿದೆ. ಇದರಿಂದ ಅಲ್ಲಿನ ವ್ಯಾಪಾರಿಗಳು ಟೊಮೆಟೊ ಖರೀದಿಗೆ ಇಲ್ಲಿನ ಮಾರುಕಟ್ಟೆಗೆ ಬರುತ್ತಿಲ್ಲ. ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರ ಭಾಗದಲ್ಲಿ ಬೆಳೆದಿರುವ ಹಣ್ಣು ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ. ಪೂರೈಕೆ ಹೆಚ್ಚಾಗಿರುವ ಪರಿಣಾಮ ಬೆಲೆ ಕುಸಿದಿದೆ’ ಎಂದು ತರಕಾರಿ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೆಂಗಿನಕಾಯಿ ದರ ಏರಿಕೆ: ಜಿಲ್ಲೆಯಲ್ಲಿ ತೆಂಗು ಬೆಳೆ ಕೈಕೊಟ್ಟಿರು ವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ.

ಒಂದು ಎಳನೀರಿಗೆ ₹ 25ರಿಂದ 30 ಧಾರಣೆಯಿದೆ. ಇದರಿಂದ ರೈತರು ಹೆಚ್ಚಾಗಿ ಎಳನೀರು ಮಾರಾಟಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ ತೆಂಗಿನಕಾಯಿ ಬೆಲೆ ಹೆಚ್ಚಳವಾಗಿದೆ. ದೊಡ್ಡಗಾತ್ರದ ಕಾಯಿಯೊಂದಕ್ಕೆ ₹ 30 ಬೆಲೆಯಿದೆ. ಸಣ್ಣಗಾತ್ರದ ಕಾಯಿಗಳು ₹ 20ಕ್ಕೆ ಮಾರಾಟವಾಗುತ್ತಿವೆ.

ಉಳಿದಂತೆ ಮಾರುಕಟ್ಟೆಯಲ್ಲಿ ಕುಂಬಳಕಾಯಿ ₹ 15, ಮಂಗಳೂರು ಸೌತೆಕಾಯಿ ₹ 30, ದಪ್ಪ ಮೆಣಸಿನಕಾಯಿ ₹ 50, ಬೆಂಡೆಕಾಯಿ ₹ 30, ಕೋಸು ₹ 40, ಸಣ್ಣ ಈರುಳ್ಳಿ ₹ 50, ಹಸಿಮೆಣಸಿಕಾಯಿ ₹ 40, ತೊಂಡೆಕಾಯಿ ₹ 40, ಗೆಡ್ಡೆಕೋಸು ₹ 40, ಸೌತೆಕಾಯಿ ₹ 20, ಗೋರಿಕಾಯಿ ₹ 30, ದಪ್ಪ ಈರುಳ್ಳಿ ₹ 30 ಧಾರಣೆಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry