ಮೀಸಲಾತಿ; ಸಮುದಾಯಕ್ಕೆ ಅನ್ಯಾಯ

ಸೋಮವಾರ, ಮೇ 20, 2019
30 °C

ಮೀಸಲಾತಿ; ಸಮುದಾಯಕ್ಕೆ ಅನ್ಯಾಯ

Published:
Updated:

ಬಂಗಾರಪೇಟೆ: ‘ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದು ಚಿಕ್ಕಬಳ್ಳಾಪುರದ ವಾಲ್ಮೀಕಿ ಬ್ರಹ್ಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಸಹಯೋಗದಲ್ಲಿ ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 19 ಲಕ್ಷ ಇದ್ದಾಗ ಶೇ 3ರಷ್ಟು ಮೀಸಲಾತಿ ಜಾರಿ ಮಾಡಲಾಯಿತು. ಈಗ ಜನಸಂಖ್ಯೆ 70 ಲಕ್ಷ ದಾಟಿದೆ. ಆದರೆ ಅದೇ ಮೀಸಲಾತಿ ಮುಂದುವರಿದಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ’ ಎಂದರು.

‘ಜನಾಂಗಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಉನ್ನತ ಮಟ್ಟದಲ್ಲಿ ಹೋರಾಟ ನಡೆದಿದೆ. ಎಲ್ಲರೂ ಒಗ್ಗಟ್ಟಾಗಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

‘ಮಹರ್ಷಿ ವಾಲ್ಮೀಕಿಯನ್ನು ಹಲವರು ದರೋಡೆಕೋರ, ಕಳ್ಳ ಎಂದು ಬಿಂಬಿಸಿದ್ದಾರೆ. ಆದರೆ ಅವರು ಬದುಕಿದ್ದೇ ತೇತ್ರಾಯುಗದಲ್ಲಿ. ಆಗ ಹಣದ ಚಲಾವಣೆ ಇರಲಿಲ್ಲ. ಹಣ ಇಲ್ಲ ಎಂದ ಮೇಲೆ ಕಳ್ಳತನದ ಮಾತೇ ಇಲ್ಲ. ಮೇಲಾಗಿ ಕಳ್ಳತನ ಮಾಡುವ ಅಗತ್ಯ ಅವರಿಗೆ ಇರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಮಾತನಾಡಿ, ‘ರಾಜ್ಯದಲ್ಲಿ ನಾಯಕ ಜನಾಂಗ ದೊಡ್ಡಮಟ್ಟದಲ್ಲಿದೆ. ಕ್ಷೇತ್ರದಲ್ಲಿ ರಾಜಕೀಯವಾಗಿ ನಾಯಕ ಜನಾಂಗ ಹಿಂದುಳಿದಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

‘ವಾಲ್ಮೀಕಿ ಅವರು ಮಹಾನ್ ಚೇತನ. ಅವರು ಜಯಂತಿ ಆಚರಣೆ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲರೂ ಸೇರಿ ಆಚರಿಸುವ ಕಾರ್ಯಕ್ರಮವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ, ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ್ ಎಲ್.ಸತ್ಯಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ, ಪ್ರಮುಖರಾದ ಬೆಳ್ಳಿ ಗಂಗಾಧರ್, ಡಿ.ಎಂ.ಶಿವಾನಂದ, ಮುರಳಿ, ಸದಾಶಿವ, ಎಸ್.ಶ್ರೀನಿವಾಸಮೂರ್ತಿ, ಅಪ್ಪೇಗೌಡ, ನಾರಾಯಣಸ್ವಾಮಿ, ಜಯಣ್ಣ ವೆಂಕಟಸ್ವಾಮಿ, ರಾಜಣ್ಣ, ಶ್ರೀನಿವಾಸ್ ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry