ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐಗೆ ವಹಿಸಲು ಒತ್ತಾಯ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರ ಅಳಿಯ ಭವಾನಿಸಿಂಗ್‌ ಅವರು ಬೆಂಗಳೂರಿನ ಬಾಲಾಜಿ ಎಲೆಕ್ಟ್ರಿಕಲ್‌ ಕಂಪೆನಿಯಿಂದ ₹ 1.15 ಕೋಟಿ ಲಂಚ ಪಡೆದಿದ್ದಾರೆ ಎನ್ನಲಾದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್‌ ಚವ್ಹಾಣ್‌ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಇಂಧನ ಇಲಾಖೆಯಲ್ಲಿ ಎಲೆಕ್ಟ್ರಿಕಲ್‌ ಗುತ್ತಿಗೆ ಕೊಡಿಸುವುದಾಗಿ ಕಂಪೆನಿಯಿಂದ 2016ರ ಜುಲೈನಲ್ಲಿ ನಗದು ರೂಪದಲ್ಲಿ ಲಂಚ ಪಡೆದು, ಬದಲಿಗೆ ಅಡ್ವಾನ್ಸ್‌ ಚೆಕ್‌ ನೀಡಿದ್ದಾರೆ. ಮಾತಿನಂತೆ ಗುತ್ತಿಗೆ ಕೊಡಿಸಿಲ್ಲ. ಅವರು ನೀಡಿರುವ ಚೆಕ್‌ ಕೂಡ ಬೌನ್ಸ್‌ ಆಗಿದೆ. ಬಾಲಾಜಿ ಎಲೆಕ್ಟ್ರಿಕಲ್‌ನವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT