ಕಸಾಯಿಖಾನೆ ಪರಿಶೀಲನೆಗೆ ಹೋದವರ ಮೇಲೆ ಹಲ್ಲೆ

ಮಂಗಳವಾರ, ಜೂನ್ 18, 2019
24 °C
ಪ್ರಾಣಾಪಾಯದಿಂದ ಪಾರಾದ ಕೋರ್ಟ್‌ ಕಮಿಷನರ್‌, ವಕೀಲರು, ಪೊಲೀಸರು

ಕಸಾಯಿಖಾನೆ ಪರಿಶೀಲನೆಗೆ ಹೋದವರ ಮೇಲೆ ಹಲ್ಲೆ

Published:
Updated:
ಕಸಾಯಿಖಾನೆ ಪರಿಶೀಲನೆಗೆ ಹೋದವರ ಮೇಲೆ ಹಲ್ಲೆ

ಬೆಂಗಳೂರು: ಯಲಹಂಕ ಉಪನಗರದ ಬೆಟ್ಟಹಳ್ಳಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗಳ ಪರಿಶೀಲನೆಗೆ ಹೋಗಿದ್ದ ಕೋರ್ಟ್ ಕಮಿಷನರ್‌ಗಳು, ಹೈಕೋರ್ಟ್‌ನ ವಕೀಲರು ಹಾಗೂ ಯಲಹಂಕ ಉಪನಗರ ಪೊಲೀಸರ ಮೇಲೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಗುಂಪೊಂದು ಹಲ್ಲೆ ಮಾಡಿದೆ. ಹೊಯ್ಸಳ ಹಾಗೂ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದೆ.

ಹೈಕೋರ್ಟ್‌ ನೇಮಿಸಿದ್ದ ಕೋರ್ಟ್‌ ಕಮಿಷನರ್ ಸಮಿತಿಯಲ್ಲಿದ್ದ ವಕೀಲರಾದ ಎಚ್.ವಿ.ಹರೀಶ್ ಹಾಗೂ ಡಿ.ಪಿ.ಪ್ರಸನ್ನ, ಸರ್ಕಾರಿ ವಕೀಲ ಎಸ್.ರಾಚಯ್ಯ, ವಕೀಲ ಪವನ್, ದೂರುದಾರರಾದ ಕವಿತಾ ಜೈನ್, ಜೋಶಿನ್ ಅಂಥೋಣಿ ಹಾಗೂ ಪೊಲೀಸರ ಮೇಲೆ ಸ್ಥಳೀಯರು ಹಾಗೂ ಕಸಾಯಿಖಾನೆಯವರು ಹಲ್ಲೆ ಮಾಡಿದ್ದಾರೆ.

ಈ ಸಂಬಂಧ 15ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರನ್ನು ಸಂಪರ್ಕಿಸಲಾಯಿತಾದರೂ ಅಧಿಕಾರಿಗಳು ಮೊಬೈಲ್‌ ಕರೆಗಳನ್ನು ಸ್ವೀಕರಿಸಲಿಲ್ಲ.

ಬದುಕಿ ಬಂದದ್ದೇ ಪವಾಡ: ‘ಹೈಕೋರ್ಟ್‌ ಸೂಚನೆಯಂತೆ ಅಕ್ರಮ ಕಸಾಯಿಖಾನೆಗಳನ್ನು ಪರಿಶೀಲಿಸಲು ಹೋಗಿದ್ದೆವು. ಇದ್ದಕ್ಕಿದ್ದಂತೆ ಕೆಲವರು ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರು. ಕಾರಿನಿಂದ ನಮ್ಮನ್ನು ಕೆಳಗೆ ಇಳಿಯಲು ಸಹ ಬಿಡಲಿಲ್ಲ. ಅಲ್ಲಿಂದ ಬದುಕಿ ಬಂದದ್ದೇ ಒಂದು ರೀತಿಯ ಪವಾಡ’ ಎಂದು ಎಚ್.ರಾಚಯ್ಯ ಹೇಳಿದರು.

‘ಬೆಳಿಗ್ಗೆಯಿಂದ ಅಕ್ರಮ ಕಸಾಯಿಖಾನೆಗಳ ಪರಿಶೀಲನೆಗೆ ನಾಲ್ಕು ಕಡೆ ಹೋಗಿದ್ದೆವು. ಅಲ್ಲೆಲ್ಲ ಪರಿಶೀಲನೆಗೆ ಸಹಕಾರ ಸಿಕ್ಕಿತ್ತು. ಆದರೆ, ಡಿ.ಬಿ.ಹಳ್ಳಿಗೆ ನಮ್ಮ ತಂಡ ಹೋಗುತ್ತಿದ್ದಂತೆ ಅಲ್ಲಿಂದ ದುಷ್ಕರ್ಮಿಗಳ ತಂಡವು ನಮ್ಮನ್ನು ತಡೆದು ಹಲ್ಲೆಗೆ ಮುಂದಾಯಿತು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry