ಬ್ಯಾಡ್ಮಿಂಟನ್: ಕ್ವಾಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಪ್ರಣಯ್‌, ಕಿದಂಬಿ ಶ್ರೀಕಾಂತ್‌, ಸೈನಾ

ಶನಿವಾರ, ಮೇ 25, 2019
28 °C

ಬ್ಯಾಡ್ಮಿಂಟನ್: ಕ್ವಾಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಪ್ರಣಯ್‌, ಕಿದಂಬಿ ಶ್ರೀಕಾಂತ್‌, ಸೈನಾ

Published:
Updated:
ಬ್ಯಾಡ್ಮಿಂಟನ್: ಕ್ವಾಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಪ್ರಣಯ್‌, ಕಿದಂಬಿ ಶ್ರೀಕಾಂತ್‌, ಸೈನಾ

‌ಒಡೆನ್ಸ್‌: ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್‌.ಎಸ್‌. ಪ್ರಣಯ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಮಲೇಷ್ಯಾದ ಲೀ ಚಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ಗಂಟೆ ಮೂರು ನಿಮಿಷ ಸೆಣಸಾಡಿ 21–17, 11–21, 21–19ರಲ್ಲಿ ಜಯ ಸಾಧಿಸಿ ಕ್ವಾಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಲೇಷ್ಯಾದ ಲೀ ಚಾಂಗ್ ವಿರುದ್ಧ ಎಚ್‌.ಎಸ್‌. ಪ್ರಣಯ್‌ ಪಡೆದ ಎರಡನೇ ಗೆಲುವು ಇದಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೊರಿಯಾದ ಜಾನ್ ಹೇಕ್ ಜಿನ್ ವಿರುದ್ಧ ಕಿದಂಬಿ ಶ್ರೀಕಾಂತ್‌ 21–13, 8–21, 21–18ರಲ್ಲಿ ಜಯ ಗಳಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್‌ 22–20, 21–13 ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ನಿಚನ್ ಜಿಂದಪಾಲ್ ವಿರುದ್ಧ ಜಯ ಸಾಧಿಸಿ ಕ್ವಾಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry