ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಮನೆಗಾಗಿ ಜಮೀನು ಖರೀದಿಸಲು ಮನವಿ

Last Updated 21 ಅಕ್ಟೋಬರ್ 2017, 6:34 IST
ಅಕ್ಷರ ಗಾತ್ರ

ಡಂಬಳ: ‘ಹೋಬಳಿ ವ್ಯಾಪ್ತಿಯಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ 100ಕ್ಕೂ ಹೆಚ್ಚು ಕುಟುಂಬಗಳು ಒಂದೇ ಕಡೆ ವಾಸಿಸುತ್ತಿದ್ದು, ಇವರಿಗೆ ಪ್ರತ್ಯೇಕವಾಗಿ ಆಶ್ರಯ ಮನೆ ನಿರ್ಮಿಸಿಕೊಳ್ಳಲು, ಸರ್ಕಾರದ ವತಿಯಿಂದ 6 ಎಕರೆ ಜಮೀನು ಖರೀದಿಸಿ ಕೊಡುವಂತೆ ಸಮುದಾಯ ಪ್ರತಿನಿಧಿಗಳು ಮಂಗಳವಾರ ಶಾಸಕ ಜಿ.ಎಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

‘ಜೀವನೋಪಾಯಕ್ಕಾಗಿ ಕೂಲಿ, ಗೌಂಡಿ ಕೆಲಸವನ್ನು ಅಲಂಬಿಸಿದ್ದೇವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸದ್ಯ ವಾಸವಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ಸ್ಥಳದ ಕೊರತೆ ಇದೆ. ಹೀಗಾಗಿ, ಪ್ರತ್ಯೇಕವಾಗಿ ನಮ್ಮ ಸಮುದಾಯಕ್ಕೆ ಆಶ್ರಯ ಮನೆಗಳನ್ನು ಕಟ್ಟಿಕೊಡಬೇಕು ಎಂದು ಸಮುದಾಯದ ಮುಖಂಡ ಕೆ.ಎನ್. ದೊಡ್ಡಮನಿ ಮನವಿ ಮಾಡಿದರು.

ನಿಂಗಪ್ಪ ಹರಿಜನ ಅಶೋಕ ತಳಗೇರಿ ಮರಿಯಪ್ಪ ಸಿದ್ದಣ್ಣನವರ,ಮರಿಯಪ್ಪ ದೊಡ್ಡಮನಿ, ದೇವಿಂದ್ರಪ್ಪ ಗೌಡಣ್ಣನವರ, ದೇವಪ್ಪ ತಳಗೇರಿ, ಮುದಕಣ್ಣ ತಳಗೇರಿ, ಶಿವಲಿಂಗೇಶ ಬೇಟಗೇರಿ, ಮಾರುತಿ ವಗ್ಗರಣಿ, ಸುರೇಶ ರಾಮೆನಹಳ್ಳಿ, ನಾಗರಾಜ ಗೋವಿನಕೊಪ್ಪ, ದೇವಪ್ಪ ದೊಡ್ಡಮನಿ, ಬಸಪ್ಪ ವಗ್ಗರಣಿ, ಮುತ್ತಪ್ಪ ತಳಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT