ನರೇಂದ್ರಚಾರ್ಯರ 51ನೇ ಜನ್ಮದಿನ ಆಚರಣೆ

ಗುರುವಾರ , ಜೂನ್ 27, 2019
26 °C

ನರೇಂದ್ರಚಾರ್ಯರ 51ನೇ ಜನ್ಮದಿನ ಆಚರಣೆ

Published:
Updated:

ಬೀದರ್: ಸ್ವಾಮಿ ನರೇಂದ್ರಚಾರ್ಯ ಮಹಾರಾಜ ಅವರ 51ನೇ ಜನ್ಮದಿನವನ್ನು ನಗರದ ಲಕ್ಷ್ಮಿಭಾಯಿ ಕಮಠಾಣೆ ಶಾಲೆಯಲ್ಲಿ ಭಾನುವಾರ ಆಚರಿಸಲಾಯಿತು.

ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು

‘ಅಜ್ಞಾನದಿಂದ ಜ್ಞಾನದ ಮಾರ್ಗ ತೋರಿಸುವವರೇ ನಿಜವಾದ ಗುರು. ಗುರು ಇಲ್ಲದೆ ಜೀವನ ಸಾಗದು, ಬದುಕು ಯಶಸ್ವಿಯಾಗಿ ನಡೆಸಬೇಕು ಅಂದರೆ ಗುರುವಿನ ಮಾರ್ಗದರ್ಶನ ಅಗತ್ಯವಿದೆ’ ಎಂದರು.

ಸತ್ಸಂಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪಕುಮಾರ ಪಾಂಚಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷರ ನಾಗಶೆಟ್ಟೆ ಧರ್ಮಪುರ, ಪ್ರಮುಖರಾದ ಶಿವಕುಮಾರ ಭಾಲ್ಕೆ, ನೀಲಕಂಠ ಬಿರಾದಾರ, ಸೂರ್ಯಕಾಂತ ಧನೆ, ವೈಶಾಲಿ ದಿಲೀಪ ಕಮಠಾಣೆ, ವಿರೂಪಾಕ್ಷ ಗಾದಗಿ ಇದ್ದರು.

ಮಲ್ಲಿಕಾರ್ಜುನ ವಲೆಂಡೆ ಸ್ವಾಗತಿಸಿ, ನಿರೂಪಿಸಿದರು. ದತ್ತಾತ್ರಿ ಬಿರಾದಾರ ವಂದಿಸಿದರು. ಇದೇ ಸಂದರ್ಭದಲ್ಲಿ ವೃದ್ಧರಿಗೆ ಹೊದಿಕೆಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry