ಶೌಚಾಲಯ ಬಾಗಿಲು ತೆರೆಯಿರಿ

ಭಾನುವಾರ, ಜೂನ್ 16, 2019
22 °C

ಶೌಚಾಲಯ ಬಾಗಿಲು ತೆರೆಯಿರಿ

Published:
Updated:

ಚಾಮರಾಜನಗರ: ನಗರದ ರಾಮಸಮುದ್ರದಲ್ಲಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿ ಏಳು ವರ್ಷ ಕಳೆದರೂ ಬಳಕೆಗೆ ಮುಕ್ತವಾಗಿಲ್ಲ.

ರಾಮಸಮುದ್ರದಿಂದ ಹರಳುಕೋಟೆಗೆ ತೆರಳುವ ಮಾರ್ಗದ ಅಂಗನವಾಡಿ ಸಮೀಪ ಈ ಶೌಚಾಲಯ ನಿರ್ಮಿಸಲಾಗಿದೆ. ವಾರ್ಡ್‌ನ ಹಿಂದಿನ ನಗರಸಭಾ ಸದಸ್ಯರು ಈ ಭಾಗದ ಜನರಿಗೆ ಅನುಕೂಲವಾಗಲೆಂದು ಶೌಚಾಲಯ ಮಂಜೂರು ಮಾಡಿಸಿ, ನಿರ್ಮಿಸಿದ್ದರು.

ಕಾಮಗಾರಿ ಸುಸಜ್ಜಿತವಾಗಿ ನಡೆದಿದ್ದು, ನೀರಿನ ಸಂಪರ್ಕವನ್ನೂ ಕಲ್ಪಿಸಲಾಗಿತ್ತು. ಆದರೆ, ಈವರೆಗೂ ಅದರ ಬಾಗಿಲು ತೆರೆದೇ ಇಲ್ಲ. ಇದರಿಂದ ಶೌಚಾಲಯ ಇದ್ದೂ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಅಳಲು.

ಕೆಲವು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಂತಹವರು ಈಗಲೂ ಬಯಲನ್ನೇ ಅವಲಂಬಿಸುವಂತಾಗಿದೆ. ಶೌಚಾಲಯ ತೆರೆದರೆ ಅವರಿಗೆ ಸಹಾಯವಾಗಲಿದೆ.

ಅಲ್ಲದೆ, ಕೂಲಿ ಕಾರ್ಮಿಕರು, ಅಂಗನವಾಡಿಗೆ ಬರುವ ಸಹಾಯಕರು, ಮಕ್ಕಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry