ಕಾಲುವೆ ಒಡೆದು ನೀರು ಬಿಟ್ಟ ಗ್ರಾಮಸ್ಥರು!

ಬುಧವಾರ, ಜೂನ್ 19, 2019
22 °C

ಕಾಲುವೆ ಒಡೆದು ನೀರು ಬಿಟ್ಟ ಗ್ರಾಮಸ್ಥರು!

Published:
Updated:
ಕಾಲುವೆ ಒಡೆದು ನೀರು ಬಿಟ್ಟ ಗ್ರಾಮಸ್ಥರು!

ತರೀಕೆರೆ: ಲಿಂಗದಹಳ್ಳಿ ಹೋಬಳಿಯ ಕಲ್ಲತ್ತಿಗಿರಿಯಿಂದ ಹೋಬಳಿಯ ಕೆರೆಗಳಿಗೆ ನೀರು ಒದಗಿಸುತ್ತಿದ್ದ ನಾಗಣ್ಣ ಕಾಲುವೆಯನ್ನು ರೈತರು ಒಡೆದಿರುವ ಘಟನೆ ಈಚೆಗೆ ನಡೆದಿದೆ. ಹಲವು ವರ್ಷಗಳಿಂದ ಈ ಹಳ್ಳದ ನೀರು ಹರಿಯುವ ವಿಚಾರವಾಗಿ ಗ್ರಾಮಸ್ಥರ ನಡುವೆ ಮನಸ್ತಾಪ ಉಂಟಾಗಿ, ಪ್ರತಿಭಟನೆಗಳು ನಡೆದು ನ್ಯಾಯಕ್ಕಾಗಿ ಒತ್ತಾಯಿಸಲಾಗುತ್ತಿತ್ತು.

ಕಲತ್ತಿಗಿರಿಯಿಂದ ಮಳೆಗಾಲದಲ್ಲಿ ಹರಿದು ಬರುವ ನೀರಿನ ಹಳ್ಳಕ್ಕೆ ಗೋಪಾಲಪುರ ಸಮೀಪದ ನಾಗಣ್ಣ ಡ್ಯಾಂ ನಿರ್ಮಿಸಿ ಅಲ್ಲಿಂದ ಲಿಂಗದಹಳ್ಳಿ, ಪಿಳ್ಳಂಗೆರೆ, ಕೆಂಚಾಪುರಕೆರೆ, ಭಗವತಿಕಟ್ಟೆ, ಸುಣ್ಣದಹಳ್ಳಿ ಕೆರೆ ನೀರು ಹರಿಸಲು ನಾಗಣ್ಣ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆಯು ನಿರ್ಮಿಸಿತ್ತು.

ಇದೇ ಹಳ್ಳಕ್ಕೆ ಹುಲಿತಿಮ್ಮಾಪುರದ ಬಳಿಯ ಜುಂಜನಕಟ್ಟೆ ಎಂಬಲ್ಲಿ ನೀರನ್ನು ದೊಡ್ಡ ನಿಂಗೇನಹಳ್ಳಿ ಕೆರೆಗೆ ತುಂಬಿಸಲು ಮತ್ತೊಂದು ಕಾಲುವೆಯನ್ನು ನಿರ್ಮಿಸಲಾಗಿತ್ತು. ಉಳಿದಂತೆ ಹಳ್ಳದ ನೀರು ಮುಂದೆ ದೊಡ್ಡ ನಿಂಗೇನಹಳ್ಳಿ ತ್ಯಾಗದ ಬಾಗಿ ಗುಳ್ಳದ ಮನೆ, ಮಲ್ಲಿಗೇನಹಳ್ಳಿ, ಸಮೀಪದಲ್ಲೇ ಹರಿದು ಜಂಬಂಧ ಹಳ್ಳ ಸೇರುತ್ತಿತ್ತು.

ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಲಿಂಗದಹಳ್ಳಿಯ ಮುಷ್ಠಿಕೆರೆ ಹಾಗೂ ಪಿಳ್ಳಯ್ಯನಕೆರೆಗೂ ಈ ಕಾಲುವೆಯಿಂದ ನೀರನ್ನು ತುಂಬಿಸಲಾಗಿತ್ತು. ಇದನ್ನು ತಿಳಿದ ದೊಡ್ಡ ನಿಂಗೇನಹಳ್ಳಿ, ಸುಣ್ಣದಹಳ್ಳಿ ಹಾಗೂ ದೋರನಾಳು, ಗುಳ್ಳದಮನೆ, ತ್ಯಾಗದಬಾಗಿ ಗ್ರಾಮಸ್ಥರು ನಮ್ಮ ಗ್ರಾಮದ ಕೆರೆಗಳಿಗೂ ನೀರು ತುಂಬಿಸುವಂತೆ ಪ್ರತಿಭಟಿಸಿ ಒತ್ತಾಯಿಸಿದ್ದರು.

ನಂತರ ಗ್ರಾಮಸ್ಥರ ಮಧ್ಯೆ ನೀರಿನ ಹಂಚಿಕೆ ಪ್ರಸ್ತಾವ ಶಾಂತಿಯುತವಾಗಿ ನಡೆದಿದ್ದರೂ, ಗ್ರಾಮಸ್ಥರ ಮಧ್ಯೆ ವಿವಾದ ಉಂಟಾಗಿ ಪೊಲೀಸ್‌ ಇಲಾಖೆಯ ಸಮ್ಮುಖದಲ್ಲಿಯೇ ಕೆಲ ಗ್ರಾಮಸ್ಥರು ಜೆಸಿಬಿಯಿಂದ ಕಾಲುವೆಯನ್ನು ಒಡೆದು ಹಾಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry