ಭಾನುವಾರ, ಸೆಪ್ಟೆಂಬರ್ 22, 2019
22 °C

ಬದುಕನ್ನೇ ಬದಲಿಸಬಲ್ಲ ಶಕ್ತಿ ಗೋವಿಗಿದೆ: ಶೆಟ್ಟಿ

Published:
Updated:
ಬದುಕನ್ನೇ ಬದಲಿಸಬಲ್ಲ ಶಕ್ತಿ ಗೋವಿಗಿದೆ: ಶೆಟ್ಟಿ

ಉಡುಪಿ: ಬದುಕಲು ಚಿಕ್ಕದೊಂದು ಅವಕಾಶ ನೀಡಿದರೆ ಮನುಷ್ಯನ ಬದುಕನ್ನೇ ಬದಲಿಸಬಲ್ಲ ಶಕ್ತಿ ಗೋವುಗಳಿಗೆ ಇದೆ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದರು.

ಕಾರ್ಕಳದ ಗೋಪಿನಾಥ ನರಸಿಂಹ ಪುರಾಣಿಕ್ ಅವರ ಗೋಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಗೋ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವ ಜೀವಿಗಳಲ್ಲಿಯೂ ದಯೆಯನ್ನು ಹೊಂದಿರಬೇಕು ಎಂದು ಭಾರತದ ಸಂಸ್ಕೃತಿ ಹೇಳುತ್ತದೆ. ನಾವು ಎಲ್ಲರನ್ನೂ ಗೌರವಿಸುವ, ಎಲ್ಲರನ್ನೂ ಪ್ರೀತಿಸುವ ತತ್ವದಲ್ಲಿ ನಂಬಿಕೆ ಇರಿಸಿಕೊಂಡವರು. ಗೋವು ವ್ಯಾಪಾರದ ಸರಕಲ್ಲ– ಪ್ರೀತಿಯ ಸಂಕೇತ ಎಂದು ತಿಳಿಸಿದರು.

ಮೂಡುಬಿದಿರೆ ಗೌರಿ ದೇವಸ್ಥಾನದ ಅರ್ಚಕ ರಾಜೇಶ್ ಭಟ್, ಪತ್ರಕರ್ತ ಕೆ. ಪದ್ಮಾಕರ ಭಟ್, ದೇವಾಡಿಗ ಸಂಘದ ಅಧ್ಯಕ್ಷ ಸುಧಾಕರ, ಉಪಾಧ್ಯಕ್ಷೆ ಕೆ. ಶಾಂತಾ ಬಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ ಮುಡಾರು, ರೆಂಜಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಸು ಶೆಟ್ಟಿ, ಕಾರ್ಕಳ ಪುರಸಭೆ ಸದಸ್ಯ ಸೀತಾರಾಮ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಭರತನಾಟ್ಯ ಶಿಕ್ಷಕ ಶ್ರೀನಿವಾಸ ಅಯ್ಯಂಗಾರ್ ಚೆನೈ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವೀಣಾ ವಾಸು ಶೆಟ್ಟಿ, ವಿಜಯ ನಾರಾಯಣ ಮರಾಠೆ ಪುಣೆ, ಪದ್ಮಿನಿ ಪೈ ಉಪಸ್ಥಿತರಿದ್ದರು.

Post Comments (+)