ಸೋಮವಾರ, ಸೆಪ್ಟೆಂಬರ್ 16, 2019
21 °C

ಬಹಿರ್ದೆಸೆಗೆ ಹೋಗಿದ್ದ ಮಹಿಳೆಯ ಫೋಟೊ ತೆಗೆದ ಬಿಜೆಪಿ ನಾಯಕ

Published:
Updated:
ಬಹಿರ್ದೆಸೆಗೆ ಹೋಗಿದ್ದ ಮಹಿಳೆಯ ಫೋಟೊ ತೆಗೆದ ಬಿಜೆಪಿ ನಾಯಕ

ಗುನಾ/ಮಧ್ಯಪ್ರದೇಶ : ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯ ಫೋಟೊವನ್ನು ಕ್ಲಿಕ್ಕಿಸಿ, ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ. 

ಗುನಾ ಜಿಲ್ಲೆಯ ಬಿಜೆಪಿಯ ವಿಭಾಗೀಯ ಅಧ್ಯಕ್ಷ ಪ್ರದೀಪ್ ಭಟ್ ಈ ಕೃತ್ಯ ಎಸಗಿದ್ದಾನೆ. 

ಈ ಘಟನೆ ಸಂಬಂಧ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ‘ಬಯಲು ಶೌಚಕ್ಕೆ ಹೋದ ಸಂದರ್ಭದಲ್ಲಿ ಫೋಟೊ ತೆಗೆಯುವುದರ ಮೂಲಕ ಕಿರುಕುಳ ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಮಹಿಳೆಯ ದೂರಿನ ಅನ್ವಯ ಭಾರತೀಯ ದಂಡ ಸಂಹಿತೆ 354ಸಿ (ಲೈಂಗಿಕ ದೌರ್ಜನ್ಯ) ಹಾಗೂ 294(ಅಸಭ್ಯ ವರ್ತನೆ)ರ ಅಡಿಯಲ್ಲಿ ಭಟ್ ವಿರುದ್ದ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Post Comments (+)