ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಮಳೆ; ದಾಳಿಂಬೆಗೆ ರೋಗ ಭೀತಿ

Last Updated 25 ಅಕ್ಟೋಬರ್ 2017, 5:04 IST
ಅಕ್ಷರ ಗಾತ್ರ

ಕಲಾದಗಿ: ಗ್ರಾಮದ ಸುತ್ತಲೂ ಸೋಮವಾರ ಬೆಳಗಿನ ಜಾವ ತುಂತುರು ಮಳೆ ಆಗಿ ಸಾಯಂಕಾಲದವರೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಮತ್ತೆ 30 ನಿಮಿಷಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಗಟಾರಗಳು ತುಂಬಿ ರಸ್ತೆ ಮೇಲೆ ಹರಿದವು.

ಸತತ ಒಂದು ತಿಂಗಳಿನಿಂದ ಸುರಿದ ಮಳೆ ಕಳೆದೊಂದು ವಾರದಿಂದ ಮಳೆರಾಯ ಬಿಡುವು ನೀಡಿದ ಹಿನ್ನೆಲೆಯಲ್ಲಿ ರೈತರು ಭರ್ಜರಿಯಾಗಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು. ದೀಪಾವಳಿ ಹಬ್ಬವನ್ನು ದೀಪದ ಜೊತೆಗೆ ಮಳೆ ಹೋಗುತ್ತದೆ ಎನ್ನುತ್ತಾರೆ. ಆದರೆ ದೀಪಾವಳಿ ನಂತರವೂ ಮಳೆ ಮತ್ತೆ ಪ್ರಾರಂಭವಾಗಿದ್ದು ಈ ಮಳೆಯಿಂದಾಗಿ ಬಿತ್ತನೆ ಕಾರ್ಯ ಮುಂದೆ ಹೋಗಿದೆ ಎಂದು ಗ್ರಾಮದ ರೈತರು ಹೇಳುತ್ತಾರೆ.

ಕಣ್ಣೀರು ತರಿಸಿದ ಈರುಳ್ಳಿ: ಕಟಾವಿಗೆ ಮುನ್ನ ಸತತವಾಗಿ ಮಳೆ ಸುರಿದ ಪರಿಣಾಮ ಈರುಳ್ಳಿ ಭೂಮಿಯಲ್ಲಿಯೇ ಅರ್ಧದಷ್ಟು ಹಾಳಾಗಿಹೊಗಿದೆ. ಉಳಿದ ಈರುಳ್ಳಿ ಕಟಾವು ಮಾಡುವಷ್ಟರಲ್ಲೆ ಮತ್ತೆ ಮಳೆ ಪ್ರಾರಂಭವಾಗಿದೆ. ಇದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಹೋದ ಬಾರಿ ಈರುಳ್ಳಿ ಬೆಳೆದ ರೈತರು ಸರಿಯಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇದೆ. ತಮ್ಮ ಹೊಲಗಳಲ್ಲಿ ಈರುಳ್ಳಿ ಕಟಾವು ಮಾಡಬೇಕನ್ನುವಷ್ಟರಲ್ಲಿ ಸತತ ಮಳೆಯಿಂದ ಬೆಳೆದ ಈರುಳ್ಳಿ ರೈತರ ಹೊಲದಲ್ಲಿ ಕೊಳೆತು ಹೋಗುತ್ತಿದೆ.

ದಾಳಿಂಬೆ ಬೆಳೆಗಾರರ ಸಂಕಷ್ಟ: ಕಲಾದಗಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಸತತ ಮಳೆಯಿಂದಾಗಿ ದಾಳಿಂಬೆ ಬೆಳೆಗೆ ರೋಗ ಬಾಧೆ ಎದುರಾಗಿದೆ. ರೋಗ ಹೊಗಲಾಡಿಸಲು ಸಾಕಷ್ಟು ಔಷಧಿ ಸಿಂಪಡಿಸಿ ದಾಳಿಂಬೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಈಗ ಮತ್ತೆ ಮಳೆ ಆರಂಭವಾಗಿರುವುದು ಮತ್ತೆ ಸಂಕಷ್ಟ ತಂದಿಟ್ಟಿದೆ. ದಾಳಿಂಬೆಗೆ ಕಜ್ಜಿರೋಗ ಆವರಿಸಿ ಹಾಳಾಗಿ ಹೋಗಿದೆ. ಅಂತಹ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಬೆಳೆಗಾರ ಸೈಪುದ್ದೀನ್ ನದಾಫ್ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT