ಟಿಪ್ಪು ಸ್ಮರಿಸಿದ ರಾಮನಾಥ ಕೋವಿಂದ್‌

ಗುರುವಾರ , ಜೂನ್ 20, 2019
29 °C
ವಿಧಾನಸೌಧ ವಜ್ರ ಮಹೋತ್ಸವ

ಟಿಪ್ಪು ಸ್ಮರಿಸಿದ ರಾಮನಾಥ ಕೋವಿಂದ್‌

Published:
Updated:
ಟಿಪ್ಪು ಸ್ಮರಿಸಿದ ರಾಮನಾಥ ಕೋವಿಂದ್‌

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಟಿಪ್ಪು ಸುಲ್ತಾನ್‌ ಸ್ಮರಿಸಿದ್ದಾರೆ.

ಬುಧವಾರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೋವಿಂದ್‌, ‘ಟಿ‌ಪ್ಪು ಅಪ್ರತಿಮ ವೀರನಾಗಿದ್ದ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದ’ ಎಂದು ಹೇಳಿದ್ದಾರೆ.‘ಬ್ರಿಟಿಷರ ವಿರುದ್ದ ಹೋರಾಡಿ ವೀರಮರಣವನ್ನು ಅಪ್ಪಿದ ಟಿಪ್ಪು ಸುಲ್ತಾನ್ ಅವರು ನಾಡಿನ ಅಭಿವೃದ್ಧಿಯ ಪಥ ಬದಲಿಸಿ ಮುಂಚೂಣಿ ನೇತಾರ. ಯುದ್ಧಭೂಮಿಯಲ್ಲಿ ಮೈಸೂರು ರಾಕೆಟ್ ಬಳಸಿದ ಅಪ್ರತಿಮ ನಾಯಕ. ಟಿಪ್ಪು ರೂಪಿಸಿದ್ದ ರಾಕೆಟ್ ತಂತ್ರಜ್ಞಾನವನ್ನು ಯುರೋಪಿಯನ್ನರು ನಂತರ ಬಳಸಿಕೊಂಡರು’ ಎಂದು ಕೋವಿಂದ್ ಹೇಳಿದರು.

ಕೋವಿಂದ್‌ ಅವರು ಟಿಪ್ಪು ಬಗ್ಗೆ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜು ತಟ್ಟಿ ತಮ್ಮ ಹರ್ಷ ವ್ಯಕ್ತಪಡಿಸಿದರು. ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಶಾಸಕರು ಈ ವೇಳೆ ಇರುಸುಮುರುಸು ಅನುಭವಿಸಿದರು.‘ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಇದ್ದಂತೆ. ಸಾಂಸ್ಕೃತಿಕ ಮತ್ತು ಭಾಷಿಕ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಇಡೀ ದೇಶದ ಯುವಕರನ್ನು ತನ್ನತ್ತ ಸೆಳೆಯುವ ಮೂಲಕ ಕರ್ನಾಟಕ ಮಿನಿ ಇಂಡಿಯಾ ಆಗಿದೆ. ಕರ್ನಾಟಕದ ಕನಸು ಇಲ್ಲಿಗೆ ಮಾತ್ರ ಸೀಮಿತವಲ್ಲ, ಇಲ್ಲಿನವರ ಕನಸು ಇಡೀ ಇಂಡಿಯಾದ ಅಭಿವೃದ್ಧಿ ಕಡೆಗೆ ಇರಲಿ’ ಎಂದು ಕೋವಿಂದ್ ನುಡಿದರು.‘ಜಾಗತಿಕ ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಗೆ ಹೆಚ್ಚು ಮಹತ್ವ ಇರುವ ಈ ಕಾಲದಲ್ಲಿ ಭಾರತ ಪ್ರಕಾಶಮಾನವಾಗಬೇಕಾದರೆ ಮತ್ತೊಮ್ಮೆ ನಾವು ಕರ್ನಾಟಕದ ಕಡೆಗೆ ನೋಡಬೇಕಾದ ಸಂದರ್ಭ ಇದಾಗಿದೆ. ತಂತ್ರಜ್ಞಾನ ಮತ್ತು ಏಕತೆಯ ಉದ್ದೇಶ ನಮ್ಮನ್ನು ಪ್ರಗತಿಯತ್ತ ಸಾಗಿಸುವುದೇ ಆಗಿದೆ. ಕರ್ನಾಟಕದ ಉಭಯ ಸದನಗಳ ಸದಸ್ಯರು ಮೇಲೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry